ಶ್ರೀ ಬೆಂಕಿನಾಥೇಶ್ವರ ಭಜನಾ ಮಂಡಳಿಯ ಸುವರ್ಣಮಹೋತ್ಸವ
ಬಜಪೆ: ಕಳವಾರು ಶ್ರೀ ಬೆಂಕಿನಾಥೇಶ್ವರ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಸಂಭ್ರಮದ ತ್ರಿದಿನ ಅಖಂಡ ಭಜನಾ ಸಂಕೀರ್ತನೆ ಹಾಗೂ ದೊಡ್ಡರಂಗಪೂಜೆ-ವಿಶೇಷ ಉತ್ಸವ ಬಲಿ ನಡೆಯಲಿದೆ.

ತ್ರಿದಿನ ಅಖಂಡ ಭಜನಾ ಸಂಕೀರ್ತನೆ:
ಫೆ,೨೪ ರಂದು ಸೋಮವಾರ ಸೂರ್ಯೋದಯದಿಂದ ಫೆ.೨೭ ಗುರುವಾರ ಸೂರ್ಯೋದಯದವರೇಗೆ ವಿವಿಧ ಭಜನಾ ಮಂಡಳಿಗಳಿದ ಭಜನಾಸಂಕೀರ್ತನೆ ನಡೆಯಲಿದೆ.
ದೊಡ್ಡರಂಗಪೂಜೆ-ವಿಶೇಷ ಉತ್ಸವ ಬಲಿ
ಫೆ.೨೮ರಂದು ಶುಕ್ರವಾರ ಸಂಜೆ ೬ ಗಂಟೆಗೆ ಶ್ರೀ ವೈ ರಾಧಾಕೃಷ್ಣ ತಂತ್ರಿಯವರ ನೀತೃತ್ವದಲ್ಲಿ ಶ್ರೀ ಬೆಂಕಿನಾಥೇಶ್ವರ ದೇವರಿಗೆ ದೊಡ್ಡರಂಗಪೂಜೆಹಾಗೂ ವಿಶೇಷ ಉತ್ಸವ ಬಲಿ ಜರಗಲಿದೆ.
ಸುವರ್ಣಮಹೋತ್ಸವದ ಸಮಾರೋಪ ಸಮಾರಂಭ ಧಾರ್ಮಿಕ ಸಭೆ:
ಮಾ ೨ರಂದು ಬಾನುವಾರ ಧಾರ್ಮಿಕ ಸಭೆಯೊಂದಿಗೆ ಸಮಾರೋಪ ಸಮಾರಂಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಭಜಕರ ಸಾದಕಪ್ರಶಸ್ತಿ ೨೦೨೨ ಪುರಸ್ಕೃತ ಶ್ರೀ ದೀನ್‌ರಾಜ್ ಕಳವಾರು ಸಾರಥ್ಯದಲ್ಲಿ ೫೦೦ ಮಕ್ಕಳಿಂದ ಸಂಜೆ ೫ ಗಂಟೇಗೆ ಕುಣಿತಭಜನೆ ನಡೆಯಲಿದೆ.
ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀ ಕೃಷ್ಣಾಪುರ ಮಠ ಉಡುಪಿ ಆಶೀರ್ವಚನ ನೀಡಲಿದ್ದಾರೆ. ಲೋಕಸಭಾ ಸದಸ್ಯ.,ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಘನ ಉಪಸ್ಥಿತಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಂಬಾಭವನ ಧರ್ಮಶಿಕ್ಷಣ ಕೇಂದ್ರ ತೊಕ್ಕೊಟ್ಟುö ಪ್ರಧಾನ ಸಂಚಾಲಕ ಡಾ.ಅರುಣ್ ಉಳ್ಳಾಲ್ ,ಎಚ್ ಆರ್.ಎಂ.ಆರ್.ಪಿ.ಎಲ್ ಸಮೂಹ ಮಹಾಪ್ರಭಂಧಕರು ಕೃಷ್ಣ ಹೆಗ್ಡೆ ಶ್ರೀಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ ನ್ಯಾಯವಾದಿ ವಿನೋಧರ ಪೂಜಾರಿ, ಶ್ರೀ ಬೆಂಕಿನಾಥೇಶ್ವರ ದೇವಸ್ಥಾನವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಚಿತ್ತರಂಜನ್ ಶೆಟ್ಟಿ ಕಳವಾರು ಗುತ್ತು, ಶ್ರೀ ಬೆಂಕಿನಾಥೇಶ್ವರ ಭಜನಾ ಮಂಡಳಿ ಅಧ್ಯಕ್ಷ ಪದ್ಮನಾಭ ಬಿ., ಬಾಳ ಗ್ರಾಮ ಪಂಚಾಯತ್ ಅಧ್ಯಕ್ಷಶಂಕರ ಜೋಗಿ, ನಮ್ಮ ಕುಡ್ಲ ಟಿವಿ ಚಾನೆಲ್ ನಿರೂಪಕಿ ಡಾ.ಪ್ರೀಯಾ ಹರೀಶ್ ಕಾರ್ಯಕ್ರಮ ನಿರ್ವಹಿಸಲಿದ್ದಾರೆ,
ವಿಜಯ ಅಮೀನ್ ಕಳವಾರು ಕೋಡಿಕೆರೆ ಇವರ ಪ್ರಾಯೋಜಕತ್ವದಲ್ಲಿ
ರಾತ್ರಿ ಗಂಟೆ ೮.೩೦ ರಿಂದ ಶ್ರೀ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ- ಸಾಹಿತ್ಯ- ಸಂಭ್ರಮ