Published On: Wed, Apr 2nd, 2025

ಬಜಪೆ‌: ಮನೆಗೆ ನುಗ್ಗಿ ಬರೋಬ್ಬರಿ ಒಂದು‌ ಕೆ.ಜಿ‌ ಗೂ ಅಧಿಕ ಚಿನ್ನಾಭರಣ ಕಳವು

ಮಂಗಳೂರು: ಮನೆಗೆ ನುಗ್ಗಿ ಬರೋಬ್ಬರಿ ಒಂದು‌ ಕೆ.ಜಿ‌ ಗೂ ಅಧಿಕ ಚಿನ್ನಾಭರಣ ಕಳವು ಮಾಡಲಾಗಿದೆ. ಅಂದಾಜು 90 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳರು ದೋಚಿದ್ದಾರೆ. ಈ ಘಟನೆ ಮಂಗಳೂರು ಹೊರವಲಯದ ಬಜಪೆ‌ ಸಮೀಪದ ಪೆರ್ಮುದೆ ಎಂಬಲ್ಲಿ ನಡೆದಿದೆ.

ಪ್ರವೀಣ್ ಪಿಂಟೋ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕುವೈಟ್ ನಲ್ಲಿರೋ‌ ಮನೆ ಮಾಲಿಕ ಪ್ರವೀಣ್ ಪಿಂಟೋ. ವರ್ಷಕ್ಕೊಮ್ಮೆ ಪೆರ್ಮುದೆಯ ಮನೆಗೆ ಬರುತ್ತಿದ್ದರು.ಕೇರಳ ಮೂಲದ ದಂಪತಿಗಳು ಮನೆ ನೋಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಮನೆಯ ಲಾಕರ್ ನಲ್ಲಿದ್ದ 1ಕೆ.ಜಿ ಬಂಗಾರ ಕಳವು ಆಗಿರೋದು ಬೆಳಕಿಗೆ ಬಂದಿದೆ.

ಮನೆಯಲ್ಲಿ 14 ಸಿ.ಸಿ.ಕ್ಯಾಮರಾ 6 ನಾಯಿಗಳಿದ್ದರೂ ಕಳ್ಳರು ಕನ್ನ ಹಾಕಿದ್ದಾರೆ. ಕಳ್ಳರು ಬಂದಿರೋ‌ಬಗ್ಗೆ ಯಾವುದೇ ಸಿ.ಸಿ.ಕ್ಯಾಮರಾದಲ್ಲೂ ಸೆರೆಯಾಗಿಲ್ಲ. ಕಿಟಕಿಯ ಸರಳು ಮುರಿದು ಮನೆ ಒಳಗೆ ಕಳ್ಳರು ಬಂದಿದ್ದಾರೆ.
ಮನೆ ನೋಡಿಕೊಳ್ಳುತ್ತಿದ್ದ ಕೇರಳ ಮೂಲದ ದಂಪತಿಗಳು ಊ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬಜಪೆ ಪೊಲೀಸರಿಂದ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಡಿ.ಸಿ.ಪಿ ರವಿಶಂಕರ್,ಫೋರೆನ್ಸಿಕ್ ತಜ್ಞರು ಸೇರಿದಂತೆ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ ಮಾಡುತ್ತಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter