ಇಸ್ಲಾಮಾಬಾದ್: ಮಾ.19: ವಿವಿಧ ಅಪರಾಧ ಪ್ರಕರಣಗಳಲ್ಲಿಭಾಗಿಯಾದ ಆರೋಪಿಗಳ ಆರೋಪ ಸಾಭೀತಾಗಿ ಗಲ್ಲುಶಿಕ್ಷೆಗೆಗುರಿಯಾ ಗಿದ್ದನಾಲ್ವರನ್ನುಪಾಕಿಸ್ಥಾನಸರ್ಕಾರಗುರುವಾರಗಲ್ಲಿಗೆ ಹಾಕಿದೆ.
ಇಲ್ಲಿನ ರಾವಲ್ಫಿಂಡಿ ಅಡಿಯಾಲಾ ಜೈಲಿನಲ್ಲಿ ಮೂವರನ್ನು ಗಲ್ಲಿಗೇರಿಸಿದ್ದು, ಮತ್ತೊಬ್ಬನನ್ನು ಮಿಯಾನನ್ ವಾಲಿ ಕಾರಾಗೃಹದ ಲ್ಲಿ ಗಲ್ಲಿಗೇರಿಸಲಾಗಿದೆ. ಮೊಹ್ಮದ್ ಅಸ್ಪರ್ ಮತ್ತು ಗುಲಾಮ್ ಮೊಹಮ ದ್ ಎಂಬ ಸೋದರರೇ ಗಲ್ಲಿಗೇರಿದ ಸಹೋದರರು. ಇವರಿಬ್ಬರು 1996 ರಲ್ಲಿ ಬಂಧುಗಳಿಬ್ಬರ ಹತ್ಯೆಮಾಡಿದ್ದ ಆರೋಪ ಹಿನ್ನೆಲೆಯಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದರು. ಮೂರನೇಯವನು 1998ರಲ್ಲಿ ವ್ಯ ಕ್ತಿಯೊಬ್ಬನ ಹತ್ಯೆ ಮಾಡಿದ್ದ. ಮತ್ತೊಬ್ಬ 7 ವರ್ಷದ ಬಾಲಕನೊಬ್ಬನನ್ನು ಅಪಹರಿಸಿ ಕೊಲೆ ಮಾಡಿದ್ದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು.
ಆದರೆ, ಒಬ್ಬ ಅಪರಾಧಿಯನ್ನು ಮಾತ್ರ ಆತನ ಪೋಷಕರು ತಮ್ಮ ಮಗನಿಗೆ ಇನ್ನೂ 14 ವಯಸ್ಸಿನವನಾಗಿದ್ದು, ಅವನಿಂದ ಪೊಲೀಸರು ಬಲವಂತವಾಗಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅವನ ಗಲ್ಲುಶಿಕ್ಷೆ ಯನ್ನು ಮುಂದಿನ ಆದೇಶದವರೆಗೂ ಕಾಯ್ದಿರಿಸಲಾಗಿದೆ.

