ಉಗಾಂಡಾದಲ್ಲಿ ತುಳುಕೂಟ ವನವಿಹಾರ
ಉಗಾಂಡಾ: ರಾಜಧಾನಿ ಕಂಪಾಲಾ ನಗರದಿಂದ 30 ಕಿಲೋಮೀಟರ್ ದೂರದಲ್ಲಿರುವ ಮುಕೊನೊ ಜಿಲ್ಲೆಯ ಕಾಸೆಂಗೆ ಫಾರೆಸ್ಟ್ ಗೆ ಸಮೀಪದಲ್ಲಿರುವ ಕಾಸೆಂಗೆ ಫಾರೆಸ್ಟ್ ರೆಸಾರ್ಟ್ ಬೀಚ್ ನಲ್ಲಿ ‘ತುಳುಕೂಟ ಕಂಪಾಲಾ’ ಅ.09ರಂದು ವನವಿಹಾರ ಏರ್ಪಡಿಸಿತ್ತು.
ಅಂದು ಭಾನುವಾರ ಉಗಾಂಡಾದ 60ನೇ ಸ್ವಾತಂತ್ರ್ಯ ದಿನವಾಗಿತ್ತು, ತುಳು ಮಾತನಾಡುವ ಸದಸ್ಯರು ಮತ್ತು ಕುಟುಂಬಗಳು ಬೆಳಿಗ್ಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿ 10:30ರ ಸುಮಾರಿಗೆ ಗಮ್ಯಸ್ಥಾನವನ್ನು ತಲುಪಿದ ಸದಸ್ಯರಿಗೆ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಉಪಹಾರವನ್ನು ನೀಡಲಾಯಿತು.
ತುಳುಕೂಟದ ಪರವಾಗಿ ಹರೀಶ್ ಭಟ್ ಸ್ವಾಗತಿಸಿದರು. ನಂತರ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗಾಗಿ ಅತ್ಯಾಕರ್ಷಕ ಆಟಗಳು ನಡೆಯಿತು. ರವಿಕಿರಣ್, ಗಣೇಶ್ ಸುವರ್ಣ, ಸುಕುಮಾರ್ ಶೆಟ್ಟಿ, ಸುನೀಲ್ ಉಚ್ಚಿಲ ಮತ್ತು ಆನಂದ ಪೂಜಾರಿ ಅವರಿಂದ, ಸಂಗೀತ ಕುರ್ಚಿ, ನಿಂಬೆ ಚಮಚ ಓಟ, ಗೂಟಕ್ಕೆ ಗುರಿ , ಶೀಶೆಗೆ ಗಾಳ, ಸಾಗುವ ಚೆಂಡು ಮತ್ತಿತರ ಆಟಗಳನ್ನು ಏರ್ಪಡಿಸಲಾಗಿತ್ತು.
DJ ರಾನ್ ಬಾಲಿವುಡ್ ಸಂಗೀತವನ್ನು ನುಡಿಸಿದರು. ವನವಿಹಾರದ ಸಮಯದಲ್ಲಿ ಮಕ್ಕಳು ಮತ್ತು ಹಿರಿಯರು ಕಾಸೆಂಗೆ ಫಾರೆಸ್ಟ್ ರೆಸಾರ್ಟ್ ಬೀಚ್ನ ಕೃತಕ ಸರೋವರದಲ್ಲಿ ದೋಣಿ ವಿಹಾರವನ್ನು ಆನಂದಿಸಿದರು.
ಕೊನೆಗೆ ಹರೀಶ್ ಭಟ್ ಧನ್ಯವಾದಗಳನ್ನು ಪ್ರಸ್ತಾಪಿಸಿದರು ಮತ್ತು ತುಳುಕೂಟ ಕಂಪಲಾ ವನವಿಹಾರದ 2022 ಕಾರ್ಯಕ್ರಮವು ಉಗಾಂಡಾದ ರಾಷ್ಟ್ರಗೀತೆಯೊಂದಿಗೆ ಸಂಜೆ 4:00 ಗಂಟೆಗೆ ಮುಕ್ತಾಯಗೊಂಡಿತು.
2009 ರಲ್ಲಿ ಕರಾವಳಿ ಕರ್ನಾಟಕದ ಆರು ಸಮಾನ ಮನಸ್ಕ ತುಳು ಮಾತನಾಡುವ ಜನರು, ಹರೀಶ್ ಭಟ್, ಸುಕುಮಾರ್ ಶೆಟ್ಟಿ, ರವಿಕಿರಣ್, ಗಣೇಶ್ ಬಂಗೇರ, ರಿತೇಶ್ ರಾವ್ ಮತ್ತು ಶ್ರೀಶ ಆಚಾರ್ಯ ಅವರು ತುಳು ಭಾಷಿಕರೆಲ್ಲರನ್ನು ಒಟ್ಟುಗೂಡಿಸಲು ಕಂಪಾಲಾದಲ್ಲಿ ತುಳು ಕೂಟವನ್ನು ರಚಿಸಿದರು ಎಂಬುದು ಗಮನಿಸಬೇಕಾದ ಸಂಗತಿ.