ಮಿಸ್ಟರ್ ಇಂಡಿಯಾ ಜಗದೀಶ್ ಪೂಜಾರಿಗೆ ದುಬಾಯಿಯಲ್ಲಿ ಮುಡಿಗೇರಿದ “ಮಯೂರ ಶ್ರೀ” ಪ್ರಶಸ್ತಿ
ಕೈಕಂಬ: ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ೨೦೨೩ ನವೆಂಬರ್ ೧೮ ರಂದು ಶಾರ್ಜಾ ಈವಾನ್ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ಸಂಘ ಶಾರ್ಜಾದ ೨೧ನೇ ವಾರ್ಷಿಕೋತ್ಸವ ಮತ್ತು ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಿವಾಸಿ ಭಾರತೀಯರಿಗೆ ಏರ್ಪಡಿಸಲಾಗಿದ್ದ ರಾಷ್ಟ್ರ ಮಟ್ಟದ ದೇಹರ್ದಾಡ್ಯ ಸ್ಪರ್ಧೆಗೆ ಮುಖ್ಯ ತೀರ್ಪುಗಾರರಾಗಿ ಮಂಗಳೂರಿನಿಂದ ಮಿಸ್ಟರ್ ಇಂಡಿಯಾ ಜಗದೀಶ್ ಪೂಜಾರಿಯವರನ್ನು ಆಹ್ವಾನಿಸಲಾಗಿತ್ತು.
ವೇದಿಕೆಯಲ್ಲಿ ಪ್ರದರ್ಶನ ನೀಡಿದ ಅನಿವಾಸಿ ಕನ್ನಡಿಗ ದೇಹರ್ದಾಡ್ಯ ಕಲಿಗಳ ಅಂಗ ಸೌಷ್ಟವ್ಯಕ್ಕೆ ತೀರ್ಪು ನೀಡಿದ ನಂತರ ಸ್ವತಹ ಜಗದೀಶ್ ಪೂಜಾರಿ ವೇದಿಕೆಯಲ್ಲಿ ದೇಹರ್ದಾಡ್ಯದ ಪ್ರದರ್ಶನ ನೀಡಿದರು.
ಜಗದೀಶ್ ಪೂಜಾರಿಯವರ ಸಾಧನೆಗೆ ಕರ್ನಾಟಕ ಸಂಘ ಶಾರ್ಜಾ ವತಿಯಿಂದ “ಮಯೂರ ಶ್ರೀ” ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಜಗದೀಶ್ ಕರ್ನಾಟಕದ ತುಳುನಾಡಿನ ಮಂಗಳೂರು ಅಡ್ಯಾರ್ ಪದವಿನ ಲಿಂಗಪ್ಪ ಪೂಜಾರಿ ಮತ್ತು ಯಮುನಾ ಪೂಜಾರಿ ದಂಪತಿಗಳ ಪುತ್ರ. ಅಂಗ ವೈಖಲ್ಯತೆ ಇದ್ದರೂ ಕಠಿಣ ದೈಹಿಕ ಕಸರತ್ತು ನಡೆಸಿ ರಾಷ್ಟ್ರದ ಗಮನ ಸೆಳೆದ ಛಲವಾದಿ ಜಗದೀಶ್ ಪೂಜಾರಿ. ವಿಕಲ
ಚೇತನವನ್ನು ಮೆಟ್ಟಿ ನಿಂತು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ದೇಹರ್ದಾಡ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಇವರು ಮಿಸ್ಟರ್ ಕದಂಬ, ಮಿಸ್ಟರ್ ವಜ್ರದೇಹಿ, ಕರ್ನಾಟಕ ಭೂಷಣ, ಮಿಸ್ಟರ್ ಕಾಸರಗೋಡು, ಮಿಸ್ಟರ್ ಕರಾವಳಿ, ಮಿಸ್ಟರ್ ಸರ್ವೋತ್ತಮ ಸಾಧಕ, ಮಿಸ್ಟರ್ ಸ್ವಾಭಿಮಾನ್, ಮಡಿಲು ಸನ್ಮಾನ ೨೦೧೯, ಬೆದ್ರ ಕ್ಲಾಸಿಕ ೨೦೨೨, ಕರ್ನಾಟಕ ಅಚೀವರ್ಸ್ ಬುಕ್ ಅಫ್ ರೆಕಾರ್ಡ್,
ಫ್ಯೂಚರ್ ಕಲಾಂ ಯೂನಿವರ್ಸಲ್ ಬುಕ್ ಅಫ್ ರೆಕಾರ್ಡ್ಸ್ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡಿರುತ್ತಾರೆ.
ಪ್ರಸ್ತುತ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಜಿಮ್ ಟ್ರೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.