ಮಯನ್ಮಾರ್: ಗುಬ್ಬಿ ಜಾತಿಗೆ ಸೇರಿದ ಪಕ್ಷಿಯೊಂದು ಸುಮಾರು 73 ವರ್ಷಗಳ ಬಳಿಕ ಮಯನ್ಮಾರ್‍ನಲ್ಲಿ ಪತ್ತೆಯಾಗಿದೆ. ಸೆಂಟ್ರಲ್ ಬಾಗೋ ಪ್ರದೇಶದಲ್ಲಿ ಈ ಪಕ್ಷಿ ಕಂಡು ಬಂದಿದೆ.

bird

ಮಯನ್ಮಾರ್ ದೇಶದಲ್ಲಿ 1941ರ ಬಳಿಕ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ 2014 ರಲ್ಲಿ ವಿಜ್ಞಾನಿಗಳು ಹಲವು ಜಾತಿಯ ಪಕ್ಷಿಗಳ ಹುಡುಕಾಟಕ್ಕಾಗಿ ಬಲೆ ಹಾಕಿದಾಗ ಈ ಪಕ್ಷಿ ಸಿಕ್ಕಿ ಬಿದ್ದಿದೆ.ಇಂತಹ ಹಲವು ಜಾತಿಯ ಪಕ್ಷಿಗಳನ್ನ ಹುಡುಕಲೆಂದೇ ವೈಲ್ಡ್ ಲೈಫ್ ಲೈಫ್ ಕನ್ಸರ್ವೇಷನ್ ಸೊಸೈಟಿ ಸದಸ್ಯರು ಕೆಲವು ಸಂಗೀತದ ಮೊರೆ ಹೋಗಿದ್ದರು. ಬಲೆ ಹಾಕಿದ್ದ ಜಾಗದಲ್ಲಿ ಕೆಲವು ಶಬ್ದಗಳ ಮೂಲಕ ಪಕ್ಷಿಗಳನ್ನು ಹತ್ತಿರ ಕರೆಯಲಾಯಿತು ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.

ಈ ಜಾತಿಯ ಪಕ್ಷಿಯನ್ನು “ಜರ್ಡಾಂನ್ ಬಬ್ಬಲರ್” ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ. ಇಂತಹ ಪಕ್ಷಿಗಳು ಸಾಮಾನ್ಯವಾಗಿ ಭಾರತ, ನೇಪಾಳ, ಪಾಕಿಸ್ತಾನ ಮತ್ತು ಮಯನ್ಮಾರ್‍ದಲ್ಲಿ ಕಂಡು ಬರುತ್ತದೆ ಎಂದು ಅವರು ಹೇಳಿದ್ದಾರೆ.ಆದರೆ 1941ರ ಬಳಿಕ ಮಯನ್ಮಾರ್‍ಲ್ಲಿ ಈ ಪಕ್ಷಿ ಕಂಡು ಬಂದಿರಲಿಲ್ಲ. ಈ ಪಕ್ಷಿ ನಿಜವಾಗಿಯೂ ಯಾವ ಜಾತಿಗೆ ಸೇರಿದ ಪಕ್ಷಿ.? ಅಥವಾ ಇದು ಹೊಸದಾಗಿ ಕಂಡು ಬಂದಿರುವ ಪಕ್ಷಿ ಇರಬಹುದಾ ಎಂದು ತಿಳಿದುಕೊಳ್ಳಲು ಈ ಪಕ್ಷಿಯನ್ನು ಡಿಎನ್‍ಎ ಪರೀಕ್ಷೆಗೆ ಒಳಪಡಿಸಲಾಗಿದೆ.

By Suddi9

Leave a Reply

Your email address will not be published. Required fields are marked *