oppo_2

ಬಂಟ್ವಾಳ :   ಗುರುವಾರ ರಾತ್ರಿ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಶಿಕಾಯಿಗುಡ್ಡೆ ನಿವಾಸಿ ಲೀಲಾ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದ ಘಟನೆ ಸಂಭವಿಸಿದೆ.

oppo_2

ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದ್ದಲ್ಲದೆ ವಿದ್ಯುತ್ ಉಪಕರಣಗಳು‌ಕರಟಿ ಹೋಗಿದೆ.ಇದರಿಂದಾಗಿ ಅಪಾರ ನಷ್ಟ ಉಂಟಾಗಿದೆ.ಅದೇರೀತಿ  ರಾಯಿ ಗ್ರಾಮದ ಕುದ್ಕೋಳಿ ನಿವಾಸಿ ಲ್ಯಾನ್ಸಿ ಕುವೆಲ್ಲೋ ರವರ ಅಡಿಕೆ ತೋಟಕ್ಕೆ ಹಾನಿಯಾಗಿದ್ದು,ಅಪಾರ ಪ್ರನಾಣದ ನಷ್ಟವುಂಟಾಗಿದೆ.


ಶುಕ್ರವಾರ ಮಧ್ಯಾಹ್ನದ ಬಳಿಕ ಬಂಟ್ವಾಳದಾದ್ಯಂತ ಗುಡುಗಿನ ಅಬ್ಬರದ ಜೊತೆಗೆ ಮಿಂಚು,ಮಳೆಯಾಗಿತ್ತು.
ಗುಡುಗಿನ ಅಬ್ಬರ ಎಷ್ಟೀತ್ತೆಂದರೆ ಜನರನ್ನೇ ಬೆಚ್ಚಿಬೀಳಿಸುವಂತಿತ್ತು.ಗಾಳಿಗೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದ ಒಳಗಿನಿಂದ ಬೆಳೆದ ಮರವೊಂದರ ಕೊಂಬೆ ಮುರಿದು ದೇವಸ್ಥಾನದ ಮಾಡಿಗೆ ಬಿದ್ದಿದೆ.


ಕತ್ತಲಾಗುವವರೆಗೂ ತುಂತುರು ಮಳೆ,ಮಿಂಚು,ಬಳಿಕ ಮೋಡ ಕವಿದ ವಾತಾವರಣವಿತ್ತು.ಕಳೆದರೆಡ್ಮೂರು ದಿನಗಳಿಂದ ಪ್ರತಿ‌ನಿತ್ಯ  ಮಧ್ಯಾಹ್ನದ ಬಳಿಕ ಮಾಮೂಲಿ ಎಂಬಂತೆ  ಗುಡುಗು,ಮಿಂಚು,ಮಳೆಯಾಗುತ್ತಲೇ ಇದೆ. 

By Suddi9