ರಷ್ಯಾ: ಡಾಲ್ಫಿನ್ ರೀತಿಯ ವಿಚಿತ್ರ ಪ್ರಬೇಧದ ಸಾಗರ ಜೀವಿಯೊಂದು ಪತ್ತೆಯಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಇದು ಯಾವ ಪ್ರಾಣಿ ಎಂಬುದು ಇನ್ನೂ ಯಾರಿಗೂ ಗೊತ್ತಾಗಿಲ್ಲ. ರಷ್ಯಾದ ಸಖಲಿನ್ ದ್ವೀಪದ ಸಮುದ್ರದ ದಡದಲ್ಲಿ ಈ ವಿಚಿತ್ರ ದೈತ್ಯ ಪ್ರಾಣಿಯ ದೇಹ ಕೊಚ್ಚಿಕೊಂಡು ಬಂದಿದ್ದು ಕುತೂಹಲ ಮೂಡಿಸಿದೆ.
ಈ ಪ್ರಾಣಿಯ ಚಿತ್ರವನ್ನು ತೆಗೆದ ಸ್ಥಳೀಯರು ಸಾಮಾಜಿಕ  ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದರಿಂದ ಈ ಪ್ರಾಣಿಯ ಬಗ್ಗೆ ಚರ್ಚೆ ಆರಂಭವಾಗಿದೆ.

animal 1


animal 2

animal 3
ಹಕ್ಕಿ ಕೊಕ್ಕೆಯ ಹಾಗೆ ಇದು ದೊಡ್ಡ ಹಾಗೂ ಚೂಪಾದ ಮೂಗನ್ನು ಹೊಂದಿದೆ. ಬಾಲದಲ್ಲಿ ತುಪ್ಪಳಗಳು (ಕೂದಲು) ಹೊಂದಿರುವ ಈ ಪ್ರಾಣಿ ಮನುಷ್ಯ£ಗಿಂತ ಎರಡು ಪಟ್ಟು ಉದ್ದವಾದ ಆಕಾರ ಹೊಂದಿದೆ. ದೈತ್ಯ ದೇಹ ಹಾಗೂ ದೊಡ್ಡ ಮೂಗು ಹೊಂದಿರುವುದರಿಂದ ಇದು ಭಾರತದ ಗಂಗಾ ನದಿಯ ಡಾಲ್ಫಿನ್ ಇರಬಹುದು ಎಂದು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ.
ಇದು ಡಾಲ್ಫಿನ್ ಜಾತಿಯ ಪ್ರಾಣಿಯಾಗಿದೆ. ಆದರೆ ಡಾಲ್ಫಿನ್‍ಗೆ ತುಪ್ಪಳಗಳು ಇರುವುದಿಲ್ಲ. ಆದರೆ ಇದು ಹೊಂದಿದೆ. ಇಂತಹ ಪ್ರಬೇಧಗಳು ತುಂಬಾ ವಿರಳ ಎಂದು ಶಕಲಿನ್ ಸಂಶೋಧನಾ ಸಂಸ್ಥೆಯ ಉಪ ಮುಖ್ಯಸ್ಥ £ಕೋಲೆ ಕಿಮ್ ಅಭಿಪ್ರಾಯಪಟ್ಟಿದ್ದಾರೆ.

By Suddi9

Leave a Reply

Your email address will not be published. Required fields are marked *