ಕಾನ್ಪುರ್: ಕಾನ್ಪುರದಲ್ಲಿ ಬಾಲನೋರ್ವ ತನ್ನ ಕ್ಯಾಮರಾದಲ್ಲಿ ಅನ್ಯಗ್ರಹ ಜೀವಿಯೊಂದನ್ನು ಸೆರೆಹಿಡಿದಿದ್ದಾನೆ. ಇದು ಭಾರೀ ಚರ್ಚೆಗೆ ಕಾರಣವಾಗಿದ್ದು, ಇದರ ಅಸಲಿಯತ್ ಬಗ್ಗೆ ತೀವ್ರ ಕುತೂಹಲ ಮೂಡಿದೆ.
ಅಭಿಜಿತ್ ಎಂಬ ಬಾಲಕ ತನ್ನ ಮೊಬೈಲ್ ಕ್ಯಾಮರಾದಲ್ಲಿ ಏಲಿಯನ್ಸ್ ಸೆರೆ ಹಿಡಿದಿದ್ದೇನೆ ಎಂದು ಹೇಳಿಕೊಂಡಿದ್ದ ಮತ್ತು ಫೋಟೋಗಳನ್ನು ಕೂಡ ತೋರಿಸಿದ್ದ. ಈ ಸುದ್ದಿ ಎಲ್ಲಡೆ ಹರಿದಾಡಿ ಜನ ಫೋಟೋ ನೋಡಲು ಬಾಲಕನ ಮನೆಯತ್ತ ಧಾವಿಸುತ್ತಿದ್ದರು.

ಬಾಲಕ ಅಭಿಜಿತ್ ಸೆರೆ ಹಿಡಿದ ಫೋಟೋಗಳನ್ನು ಐಐಟಿ ಪ್ರಾಧ್ಯಾಪಕರು ಪರಿಶೀಲಿಸಿದ್ದಾರೆ. ಮೊಬೈಲ್‍ನ ಯುಎಫ್‍ಒ ಫೋಟೋ ಆ?ಯಪ್ ಅಥವಾ ಸಾಫ್ಟ್‍ವೇರ್‍ನಲ್ಲಿ ಏಲಿಯನ್ಸ್ ಹಾಗೆ ಕಾಣುವಂತೆ ಫೋಟೋಗಳನ್ನು ಎಡಿಟ್ ಮಾಡಲಾಗಿದೆ. ಅವು ನಿಜವಾದ ಏಲಿಯನ್ಸ್‍ಗಳಲ್ಲ ಎಂದು ಪ್ರಾಧ್ಯಾಪಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಅಭಿಜಿತ್ ಮೊಬೈಲ್ ಸಾಫ್ಟ್‍ವೇರ್‍ನಲ್ಲಿ ಮೂಲಕ ಏಲಿಯನ್ಸ್ ತರ ಫೋಟೋ ಎಡಿಟ್ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ತಮ್ಮ ಮನೆಯ ಮಹಡಿ ಮೇಲೆ ಎರಡು ಬಾರಿ ಏಲಿಯನ್ಸ್ ಚಿತ್ರ ಸೆರೆಹಿಡಿದಿರುವುದಾಗಿ ಶ್ಯಾಮನಗರದಲ್ಲಿರುವ ಸಂತೋಷ್ ಗುಪ್ತಾ ಅವರ ಮಗ ಅಭಿಜಿತ್ ಹೇಳಿಕೊಂಡಿದ್ದ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. 11 ವರ್ಷದ ಅಭಿಜಿತ್ ಐದನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.
