ಕಲ್ಲಡ್ಕ: ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕದದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲಾಯಿತು. ವಿದ್ಯಾಕೇಂದ್ರದ ಕ್ರೀಡಾಂಗಣದಲ್ಲಿ 3500 ವಿದ್ಯಾರ್ಥಿಗಳಿಂದ ’75’ರ ಸಂಕೇತ ರಚಿಸಲಾಯಿತು. ನಿಟಿಲಾಕ್ಷ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ. ಎ. ಸುಬ್ರಹ್ಮಣ್ಯ. ಭಟ್ ಚನಿಲ ಧ್ವಜಾರೋಹಣ ಮಾಡಿದರು.

ಈ ಸಂದರ್ಭದಲ್ಲಿ ಉಮಾಶಿವ ಕ್ಷೇತ್ರದ ಅಧ್ಯಕ್ಷರಾದ ರಾಕೋಡಿ ಈಶ್ವರ ಭಟ್, ಉದ್ಯಮಿಗಳಾದ ಉಲ್ಲಾಸ್, ಅಕ್ಷಯ್ ಮೋಟಾರ್ಸ್ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಜೈಕಿಶನ್, ರಾಮಕೃಷ್ಣ ಕ್ರೆಡಿಟ್ ಕೊ. ಅಪರೇಟಿವ್ ಸೊಸೈಟಿಯ ಮ್ಯಾನೇಜರ್ ಚಂದ್ರಹಾಸ ಶೆಟ್ಟಿ ಪಿಲಿಂಜ, ಹಿರಿಯರಾದ ಡಾ| ಕಮಲ ಪ್ರ.ಭಟ್, ಸಂಚಾಲಕರಾದ ವಸಂತ ಮಾಧವ, ಸಹ ಸಂಚಾಲಕರಾದ ರಮೇಶ್ ಎನ್, ಆಡಳಿತ ಮಂಡಳಿ ಸದಸ್ಯರು, ಅಭಿವೃದ್ದಿ ಸಮಿತಿ ಸದಸ್ಯರು, ವಿಭಾಗ ಪ್ರಮುಖರು, ಪೋಷಕರು, ಬೋಧಕರು, ಬೊಧಕೇತರರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು. ಧ್ವಜಾರೋಹಣದ ಬಳಿಕ ವಿವಿಧ ವಿಭಾಗಗಳಲ್ಲಿ ಸಾಂಸ್ಕೃತಿಕ ಕಾರ್‍ಯಕ್ರಮ ನೆರವೇರಿತು.

By suddi9

Leave a Reply

Your email address will not be published. Required fields are marked *