ಶ್ರೀರಾಮ ಪ್ರೌಢಶಾಲೆಯ ನೂತನ ಮುಖ್ಯೋಪಾಧ್ಯಾಯರಾಗಿ ಶ್ರೀ ಗೋಪಾಲ ಎಂ
ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆಯ ನೂತನ ೫ನೇ ಮುಖ್ಯೋಪಾಧ್ಯಾಯರಾಗಿ ಶ್ರೀ ಗೋಪಾಲ ಎಂ. ಅಮ್ಟೂರು ಇವರಿಗೆ ಜವಾಬ್ದಾರಿ ವಹಿಸಲಾಯಿತು. ಬೆಳಿಗ್ಗೆ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ವಿದ್ಯಾಕೇಂದ್ರದ ಹಿರಿಯರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ, ನಂತರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಶ್ರೀಮತಿ ಶಾಂಭವಿ ಮಾತಾಜಿಯವರು ಕಚೇರಿಯಲ್ಲಿ ಗೋಪಾಲ ಶ್ರೀಮಾನ್ ಇವರಿಗೆ ಕಚೇರಿಯ ಕೀ ಗಳನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಇವರು ಪ್ರೌಢ ಶಾಲೆಯ ಪ್ರಥಮ ತಂಡದ ವಿದ್ಯಾರ್ಥಿಯಾಗಿರುತ್ತಾರೆ. ಮತ್ತು ಪ್ರೌಢಶಾಲೆಯಲ್ಲಿ ೩೨ ವರ್ಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ಮುಖ್ಯೋಪಾಧ್ಯಾಯರಾಗಿ ಜವಾಬ್ಧಾರಿ ವಹಿಸಿಕೊಂಡರು.
ವಿದ್ಯಾಕೇಂದ್ರದ ಹಿರಿಯರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ತಿಲಕವಿಟ್ಟು ಆಶೀರ್ವಾದ ಮಾಡಿದರು. ಈ ಸಂಧರ್ಭದಲ್ಲಿ ಶ್ರೀಮತಿ ಕಮಲಾ ಪ್ರ. ಭಟ್, ಅಧ್ಯಕ್ಷರಾದ ಶ್ರೀ ಬಿ. ನಾರಾಯಣ ಸೋಮಯಾಜಿ, ಸಂಚಾಲಕರಾದ ಶ್ರೀ ವಸಂತ ಮಾಧವ, ಸಹಸಂಚಾಲಕರಾದ ಶ್ರೀ ರಮೇಶ್ ಎನ್. ಆಡಳಿತ ಮಂಡಳಿ ಸದಸ್ಯರು, ಎಲ್ಲಾ ವಿಭಾಗದ ಪ್ರಮುಖರು, ಶಿಕ್ಷಕರು, ಶಿಕ್ಷಕೇತರರು, ಉಪಸ್ಥಿತರಿದ್ದರು.