Published On: Fri, Aug 19th, 2022

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವ್ಯಾಸ ಧ್ಯಾನ ಮಂದಿರದಲ್ಲಿ ಪೋಷಕರ ಸಭೆ

ಕಲ್ಲಡ್ಕ: ಪೋಷಕರ ಸಭೆ ಆ.17ರಂದು ಬುಧವಾರ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವ್ಯಾಸ ಧ್ಯಾನ ಮಂದಿರದಲ್ಲಿ೨೦೨೨-೨೩ ನೇ ಶೈಕ್ಷಣಿಕ ವರ್ಷದಪೂರ್ವ ಪ್ರಾಥಮಿಕ ಹಾಗೂ ಹಿರಿಯ ವಿಭಾಗದ ಪೋಷಕರ ಸಭೆಯು ಎರಡು ಹಂತಗಳಲ್ಲಿ ನಡೆಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್‌ ಕಲ್ಲಡ್ಕ ಮಾತನಾಡುತ್ತಾ, “ಶ್ರೀರಾಮ ವಿದ್ಯಾಸಂಸ್ಥೆಯುಗುಣ ಪ್ರಧಾನವಾದ ಶಿಕ್ಷಣ ನೀಡುತ್ತದೆ. ಗುಣ ಇಲ್ಲದಿದ್ದರೆ ಹಣಕ್ಕೂ ಬೆಲೆ ಇಲ್ಲ. ಮಗುವನ್ನು ಬೆಳೆಸುವಲ್ಲಿ ಶಾಲೆಯ ಪ್ರಾತ್ರ ಇರುವಷ್ಟೇ ಪೋಷಕರ ಪಾತ್ರವೂ ಇದೆ. ಮೊಬೈಲು ಹಾಗೂ ಟಿ.ವಿ ನೋಡುವುದನ್ನುಕಡಿಮೆ ಮಾಡಬೇಕು. ಇದರಿಂದ ಮೆದುಳು ಹಾಗೂ ಹೃದಯದ ಮೇಲೆ ಹೆಚ್ಚಿನ ಪೆಟ್ಟು ಹೇಳುತ್ತದೆ. ಮಕ್ಕಳ ಶಿಕ್ಷಣದ ಕಡೆಗೆ ಗಮನ ನೀಡದಿದ್ದರೆ ಮಕ್ಕಳಿಗೆ ಇತರ ವಿಚಾರಗಳಲ್ಲಿ ಆಕರ್ಷಣೆ ಹೆಚ್ಚುತ್ತದೆ. ಸ್ವಚ್ಚ ಶರೀರ ಮತ್ತು ಸ್ವಚ್ಛ ಮನಸ್ಸುಎನ್ನುವುದು ಬೆಳೆಸಬೇಕು. ಶಿಕ್ಷಣದ ಜೊತೆ ಜೊತೆಗೆಯೋಗ, ಆಧುನಿಕ ಶಿಕ್ಷಣಕ್ಕೆ ಪೂರಕವಾದ ಕಂಪ್ಯೂಟರ್ ಲ್ಯಾಬ್, ಸೈನ್ಸ್ ಲ್ಯಾಬ್ ಹಾಗೂ ಸ್ಮಾರ್ಟ್ ರೂಮ್‌ಗಳು ಹೊಂದಿದ್ದು ೧ನೇ ತರಗತಿಯಿಂದಲೇ ಕಂಪ್ಯೂಟರ್‌ ತರಗತಿಯನ್ನು ಆರಂಭಿಸಲಾಗಿದೆ. ಪಠ್ಯೇತರ ಚಟುವಟಿಕಯಾದ ಯಕ್ಷಗಾನ, ಸಂಗೀತ, ಭರತನಾಟ್ಯ, ಚಿತ್ರಕಲೆ, ತಬಲ, ಹಾರ್ಮೋನಿಯಂ ಇತ್ಯಾದಿ ತರಬೇತಿಯನ್ನು ನೀಡಲಾಗುತ್ತಿದೆ. ಕರಕುಶಲ ತರಬೇತಿಯನ್ನು ಕೂಡ ನೀಡುತಿದೆ. ಒಂದು ಬದುಕಿಗೆ ಪೂರಕವಾದ ಎಲ್ಲಾ ಶಿಕ್ಷಣವನ್ನು ಈ ಶಿಕ್ಷಣ ಸಂಸ್ಥೆ ನೀಡುತ್ತಿದೆ.” ಎಂದು ತಮ್ಮಅಧ್ಯಕ್ಷೀಯ ನುಡಿಗಳಲ್ಲಿ ತಿಳಿಸಿದರು.

“ನಮ್ಮ ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ಕಲಿಸಿಕೊಡುವ ವಿದ್ಯಾಸಂಸ್ಥೆ ಬೇಕು ಎನ್ನುವ ಕಾರಣಕ್ಕೆ ಶ್ರೀರಾಮ ಸಂಸ್ಥೆಗೆ ಸೇರಿಸಿದ್ದೇವೆ. ಸರ್ವಾಂಗೀಣ ಬೆಳವಣಿಗೆಗೆ ಮಾತೃಭಾಷೆ ಅತ್ಯಗತ್ಯ. ಒಬ್ಬ ವಿದ್ಯಾರ್ಥಿಯ ಪರಿಪೂರ್ಣ ವಿಕಾಸ ಈ ಶಿಕ್ಷಣ ಸಂಸ್ಥೆಯಲ್ಲಿ ಆಗ್ತಿದೆ. ಅದಕ್ಕೆ ಧನ್ಯತೆಯ ಭಾವಇದೆ. ಶ್ಲೋಕ, ಭಗವದ್ಗೀತೆಯನ್ನು ಹೇಳಿಕೊಡುವುದರಿಂದ ಉಚ್ಚಾರ ಸ್ಪಷ್ಟವಾಗುತ್ತದೆ. ಅಳಿದು ಹೋಗುತ್ತಿರುವ ತುಳುನಾಡಿನ ಹಬ್ಬಗಳನ್ನು ಆಚರಿಸುತ್ತಿರುವುದು ಮತ್ತು ಅದನ್ನು ನೆನಪಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ, ದೇಶಭಕ್ತರ, ಸ್ವಾತಂತ್ರ್ಯ ಹೋರಾಟಗಾರರ ಕಥೆಗಳು ಹೇಳುವುದರಿಂದ ರಾಷ್ಟ್ರಪ್ರೇಮ ಬೆಳೆಯುತ್ತದೆ ಹಾಗೂ ದೇಶಾಭಿಮಾನ ಬೆಳೆಯುವಲ್ಲಿ ಈ ಸಂಸ್ಥೆ ಶ್ರಮಿಸುತ್ತದೆ. ಆಂಗ್ಲ ಮಾಧ್ಯಮದಿಂದತೆಗೆದು ಈ ಶಾಲೆಗೆ ಸೇರಿಸಿದಕ್ಕೆ ಸಾರ್ಥಕತೆಇದೆ. ಶಿಕ್ಷಣದ ಜೊತೆಜೊತೆಗೆ ಪಠ್ಯೇತರಚಟುವಟಿಕೆಯಲ್ಲಿ ಭಾಗವಹಿಸಲು ಪೂರ್ಣ ಅವಕಾಶ ಈ ಶಾಲೆಯಲ್ಲಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಉತ್ತಮ ವ್ಯಕ್ತಿಯಾಗಿ ಬಾಳ್ತಾರೆ” ಎಂದು ಪೋಷಕರು ತಮ್ಮ ತಮ್ಮ ಅಭಿಪ್ರಾಯ ಮಂಡಿಸಿದರು.

ಪೋಷಕರು ಆಗಮಿಸಿದಾಗ ವಿದ್ಯಾರ್ಥಿನಿಯರುರಕ್ಷೆಕಟ್ಟಿ ಆರ್ಶೀವಾದ ಪಡೆದುಕೊಂಡರು. ಅನಂತರ ಬಂದಂತಹ ಪೋಷಕರಿಂದ ಭಾರತ ಮಾತೆಗೆ ಪುಷ್ಪಾರ್ಚನೆ ನಡೆಯಿತು. ಪೂರ್ವಗುರುಕುಲದ ಪರಿಕಲ್ಪನೆಯ ಬಗ್ಗೆ ಅಧ್ಯಾಪಕರಾದ ರೂಪಕಲಾ ಎಂ ಹಾಗೂ ಶಾಲೆ ಬೆಳೆದು ಬಂದರೀತಿಯ ಬಗ್ಗೆ ಹಿ. ಪ್ರಾ. ವಿಭಾಗದ ಅನ್ನಪೂರ್ಣಎನ್ ಭಟ್ ಸಂಕ್ಷೀಪ್ತವಾಗಿತಿಳಿಸಿದರು.

ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್‌ಎನ್., ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯೆ ಡಾ. ಕಮಲಾ ಪ್ರಭಾಕರ್ ಭಟ್‌ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಸಾಲ್ಯಾನ್‌ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter