ಆ.29ರಂದು ಕಲ್ಲಡ್ಕ ವಲಯ ಕಬ್ಬಡ್ಡಿ ಪಂದ್ಯಾಟ ಮತ್ತು ರಾಷ್ಟ್ರೀಯ ಕ್ರೀಡಾ ದಿನಾಚರಣೆ
ಕಲ್ಲಡ್ಕ: ವಲಯ ಕಬಡ್ಡಿ ಪಂದ್ಯಾಟವು ರಾಷ್ಟ್ರೀಯ ಕ್ರೀಡಾ ದಿನದಂದೇ ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಶ್ರೀ ಸನತ್ ರೈ ದೀಪ ಬೆಳಗಿಸಿ ಪಂದ್ಯಾಟ ಉದ್ಘಾಟಿಸಿ ಶುಭ ಹಾರೈಸಿದರು, ಶ್ರೀ ವಿಷ್ಣು ಹೆಬ್ಬಾರ್, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರು ಕ್ರೀಡಾ ಕ್ಷೇತ್ರದಲ್ಲಿ ದೇಶದ ಕೀರ್ತಿಪತಾಕೆಯನ್ನು ಯಶಸ್ಸಿಯಾಗಿ ಜಗತ್ತಿನ ಎತ್ತರಕ್ಕೆ ಏರಿಸಿದರು ಎಂದು ಅವರ ಜನ್ಮದಿನದಂದೇ ಕ್ರೀಡೆಯಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ಹಾರೈಸಿದರು.
ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ ಶ್ರೀಮಾನ್ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಶ್ರೀ ಗೋಪಾಲ್ ಶ್ರೀಮಾನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೊಟ್ರೇಶ್ ಶ್ರೀಮಾನ್ ನಿರೂಪಿಸಿ. ವಿದ್ಯಾರ್ಥಿ ಅನುಷಾ ಸ್ವಾಗತಿಸಿ ಅನುಷಾ ಆಳ್ವ ವಂದಿಸಿದಳು.
ಕಲ್ಲಡ್ಕ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಶ್ರೀರಾಮ ಪ್ರೌಢಶಾಲೆಯ ೧೭ರ ವಯೋಮಾನದ ಬಾಲಕ ಮತ್ತು ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಯಿತು.