ಸ್ಕಾಂಡಿನೇವಿಯಾ: ಫೆ. 22ಕ್ಕೆ ಭೂಮಿ ಅಂತ್ಯವಾಗಲಿದೆಯೇ? ಹೌದೆನ್ನುತ್ತದೆ ಸ್ಕ್ಯಾಂಡಿನೇವಿಯಾದ ಪುರಾಣಗಳು. ಸ್ಕ್ಯಾಂಡಿನೇವಿಯನ್ ಅಥವಾ ನೋಸರ್್ ಮೈಥೋಲಜಿ ಪ್ರಕಾರ ಫೆ. 22ರ ಶನಿವಾರ ಭೂಮಿ ಎರಡು ಹೋಳಾಗಲಿದ್ದು ಭೂಮಿಯೊಳಗಿರುವ ವಿಚಿತ್ರ ಪ್ರಾಣಿಗಳು ಹೊರಬಂದು ಮನುಷ್ಯನ ಸರ್ವನಾಶಕ್ಕೆ ಕಾರಣವಾಗಲಿದೆ.norsegods-jpg
ನೋಸರ್್ ಪುರಾಣದ ಪ್ರಕಾರ ನೋಸರ್್ ದೇವತೆಗಳು ಈ ದಿನ ಪರಸ್ಪರ ಯುದ್ಧದಲ್ಲಿ ತೊಡಗಲಿದ್ದು ಪರಸ್ಪರರ ಹತ್ಯೆ ಮಾಡುವರು. ಇದರ ಪರಿಣಾಮವಾಗಿ ಭೂಮಿ ಬಾಯ್ತೆರೆದು ಸಕಲ ಜೀವರಾಶಿಗಳನ್ನು ತನ್ನ ಒಡಲಿಗೆ ಸೇರಿಸಿಕೊಳ್ಳುವುದು. ಆದರೆ ಇಬ್ಬರು ಮನುಷ್ಯರು ಜೀವಂತವಾಗುಳಿದು ಹೊಸದಾಗಿ ಜನ್ಮ ತಾಳುವ ಭೂಮಿಯಲ್ಲಿ ಮನುಷ್ಯನ ಮರು ಉತ್ಪತ್ತಿಗೆ ಕಾರಣವಾಗುವರು ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದಯೂ ಹಲವು ಬಾರಿ ಭೂಗ್ರಹದ ಅಂತ್ಯದ ಬಗ್ಗೆ ಭವಿಷ್ಯ ನುಡಿಯಲಾಗಿತ್ತು. ಈ ಕುರಿತು ಜಗತ್ತಿನ ಹಲವು ಪುರಾತನ ಜನಾಂಗಗಳ ಪುರಾಣಗಳಲ್ಲಿ ಭಿನ್ನಭಿನ್ನವಾದ ಉಲ್ಲೇಖಗಳಿವೆ. ಇತ್ತೀಚೆಗಷ್ಟೇ ಮಾಯನ್ ಕ್ಯಾಲೆಂಡರ್ ಪ್ರಕಾರ 2012ಕ್ಕೆ ಭೂಮಿ ಅಂತ್ಯವಾಗುವುದಾಗಿ ಗುಲ್ಲೆಬ್ಬಿಸಲಾಗಿತ್ತು. ಆದರೆ ಭೂಮಿಗೆ ಯಾವುದೇ ಅಪಾಯವಾಗಲಿಲ್ಲ. ಸದ್ಯ ನೋಸರ್್ ಭವಿಷ್ಯ ಹೊರಬಿದ್ದಿದ್ದು ಇಂದೇ ಭೂಮಿ ಅಂತ್ಯವಾಗುವುದಾಗಿ ಹೇಳಲಾಗುತ್ತಿದೆ. ಈ ಮಾತು ಕೂಡಾ ಸತ್ಯಾಂಶವನ್ನು ಹೊಂದಿರುವಂತೆ ಕಾಣುತ್ತಿಲ್ಲ.

By suddi9

Leave a Reply

Your email address will not be published. Required fields are marked *