RakhiSawanth

 

rakhi
ದೆಹಲಿ: ನಿವೃತ್ತ ಸೇನಾಧಿಕಾರಿ ವಿ.ಕೆ ಸಿಂಗ್ ಅಧಿಕೃತವಾಗಿ ಬಿಜೆಪಿ ಸೇರಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದಿಢೀರ್ ಪ್ರತ್ಯಕ್ಷಳಾದ ಬಾಲಿವುಡ್ನ ಹಾಟ್ ಬೆಡಗಿ ರಾಖಿ ಸಾವಂತ್ ಬಿಜೆಪಿ ಸೇರುವ ಸೂಚನೆ ನೀಡಿದ್ದಾಳೆ. ಮಾಜಿ ಜನರಲ್ ವಿ.ಕೆ ಸಿಂಗ್ ಅವರನ್ನು ಪಕ್ಷದ ಅದ್ಯಕ್ಷ ರಾಜ್ನಾಥ್ ಸಿಂಗ್ ಆತ್ಮೀಯತೆಯಿಂದ ಬರಮಾಡಿಕೊಂಡಾಗ ರಾಖಿ ಕೂಡಾ ಉಪಸ್ಥಿತಲಿದ್ದಳು. ಇದೇ ವೇಳೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಬಾಯಿತುಂಬಾ ಹೊಗಳಿದ ರಾಖಿ ಮೋದಿಯೇ ಮುಂದಿನ ಪ್ರಧಾನಿಯಾಗಬೇಕೆಂದು ಹೇಳಿದರು. ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿಯನ್ನು ಮದುವೆಯಾಗಲು ಸಿದ್ಧಳಿದ್ದೇನೆ ಆದರೆ ನರೇಂದ್ರ ಮೋದಿಯೇ ದೇಶದ ಮುಂದಿನ ಪ್ರಧಾನಿಯಾಗಬೇಕು ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಳು. ಈಗ ಮತ್ತೊಮ್ಮೆ ಸ್ಪಷ್ಟ ಮಾತುಗಳಲ್ಲಿ ನರೇಂದ್ರ ಮೋದಿಯೇ ದೇಶದ ಮುಂದಿನ ಪ್ರಧಾನಿಯಾಗಬೇಕು ಎಂದು ಹೇಳುವ ಮೂಲಕ ಬಿಜೆಪಿ ಪಾಳಯಕ್ಕೆ ಹತ್ತಿರವಾಗಿದ್ದಾಳೆ.
ರಾಜಕೀಯದ ಗಂಧಗಾಳಿ ತಿಳಿಯದ ರಾಖಿ ರಾಜಕೀಯ ಪಕ್ಷವನ್ನು ಸೇರುವ ಪ್ರಕ್ರಿಯೆ ಬಗ್ಗೆಯೂ ಮಾಹಿತಿ ಹೊಂದಿಲ್ಲ. ಆದರೆ ಪಕ್ಷ ಬಯಸಿದರೆ ಚುನಾವಣೆಯಲ್ಲಿ ಸ್ಪಧರ್ಿಸಲು ಸಿದ್ಧ ಎಂದಾಕೆ ತಿಳಿಸಿದ್ದಾಳೆ

 

By suddi9

Leave a Reply

Your email address will not be published. Required fields are marked *