ಫೇಸ್ಬುಕ್ ಖಾತೆ ತೆರೆದ ಕಾರಣಕ್ಕೆ ಕಲ್ಲಿನಿಂದ ಹೊಡೆದು ಸಾಯಿಸಿದರು
ಸಿರಿಯಾ: ನೀವು ಫೇಸ್ಬುಕ್ ಅಕೌಂಟ್ ಹೊಂದಿದ್ದಿಡ್ದರಾ ಹಾಗಾದರೆ ಸಿರಿಯಾ ದೇಶದತ್ತ ಮುಖ ಮಾಡಿ ಮಲಗಲೂಬೇಡಿ. ಯಾಕೆಂದರೆ ಅಲ್ಲಿ ಫೇಸ್ಬುಕ್ ಅಕೌಂಟ್ ಹೊಂದುವುದೇ ಬಹುದೊಡ್ಡ ಅಪರಾಧವಾಗಿ ಪರಿಣಮಿಸಿದೆ. ಫೇಸ್ಬುಕ್ನಲ್ಲಿ ಖಾತೆ ತೆರೆದಳು ಎಂಬ ಒಂದೇ ಕಾರಣಕ್ಕೆ ಯುವತಿಯೊರ್ವಳನ್ನು ಕಲ್ಲಿನಿಂದ ಹೊಡೆದು ಸಾಯಿಸಿದ ಘಟನೆ ಸಿರಿಯಾದಲ್ಲಿ ನಡೆದಿದೆ.
ಸಿರಿಯಾದ ರಕ್ಕಾ ನಗರದ ಫಾಟೊಮ್ ಅಲ್-ಜಸೆಮ್ ಎಂಬಾಕೆ ಫೇಸ್ಬುಕ್ನಲ್ಲಿ ತನ್ನ ಅಕೌಂಟ್ ತೆರೆದಿದ್ದಳು ಇಷ್ಟಕ್ಕೆ ಅಲ್ಲಿನ ಮೂಲಭೂತವಾದಿ ಸಂಘಟನೆ ಐಎಸ್ಐಎಲ್ನ ಉಗ್ರರು ಆಕೆಯನ್ನು ಹೊತ್ತೊಯ್ದು ಅಲ್-ರೆಕ್ಕಾ ಧಾಮರ್ಿಕ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ಅಲ್ಲಿನ ನ್ಯಾಯಾಲಯ ಫೇಸ್ಬುಕ್ನಲ್ಲಿ ಖಾತೆ ತೆರೆಯುವುದು ವ್ಯಭಿಚಾರಕ್ಕೆ ಸಮನಾಗಿದೆ ಎಂದು ತೀಪರ್ಿತ್ತು ಆಕೆಗೆ ಮರಣದಂಡನೆ ವಿಧಿಸಿತು.

