ಬಂಟ್ವಾಳ: ಕ್ರೀಡೆ ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ, ಶಿಸ್ತನ್ನು ಬೆಳೆಸುವ ಪರಿಣಾಮಕಾರಿ ಮಾಧ್ಯಮ. ಕ್ರೀಡೆಯ ಮೂಲಕ ದೈಹಿಕ ಚಟುವಟಿಕೆಗಳೊಂದಿಗೆ ಮಾನಸಿಕ ವಿಕಾಸಕ್ಕೂ ಸಹಕಾರಿಯಾಗಿದೆ ಎಂದು ಬಂಟ್ವಾಳ ತಾಲ್ಲೂಕು ದೈಹಿಕ ಶಿಕ್ಷಣ ನಿರೀಕ್ಷಕರಾದ ಆಶಾ ನಾಯಕ್ ನುಡಿದರು. ಶ್ರೀ ವೆಂಕಟರಮಣಸ್ವಾಮೀ ಸಮೂಹ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. 

 

ಸಂಚಾಲಕರು, ಎಸ್.ವಿ.ಎಸ್. ಸಮೂಹ ವಿದ್ಯಾಸಂಸ್ಥೆ ಯ ಸಂಚಾಲಕರಾದ ಕೆ. ರೇಖಾ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಸ್ ವಿ ಎಸ್ ಕಾಲೇಜಿನ‌ ಪ್ರೊ.ಎಂ.ಡಿ.ಮಂಚಿ,  ಎಸ್.ವಿ.ಎಸ್. ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಹರಿಪ್ರಸಾದ್ ಉಪಸ್ಥಿತರಿದ್ದರು. ಬಿ.ಆರ್.ಎಂ.ಪಿ.ಸಿ. ಶಾಲೆಯ ಪ್ರಾಂಶುಪಾಲರಾದ ಪೂರ್ಣೇಶ್ವರಿ ಭಟ್ ಸ್ವಾಗತಿಸಿ, ಎಸ್.ವಿ.ಎಸ್. ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್ ಬಿ ವಂದಿಸಿದರು.  ಚೈತ್ರಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಆಶ್ನಿ ಆರ್ ಶೆಟ್ಟಿ ತಂಡದವರು ಪ್ರಾರ್ಥಿಸಿದರು.  ಗೌತಮಿ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಶ್, ಪ್ರತೀಕ್ಷಾ, ಶ್ರೀಮತಿ ಸುರೇಖಾ ಕ್ರೀಡಾಕೂಟವನ್ನು ನಡೆಸಿಕೊಟ್ಟರು. ಕ್ರೀಡಾಕೂಟದ ಆರಂಭದಲ್ಲಿ ಸಮೂಹ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. 

By Suddi9