ಬಂಟ್ವಾಳ:  ತೋಟಗಾರಿಕಾ ಇಲಾಖೆ ಬಂಟ್ವಾಳ ವತಿಯಿಂದ  ಮಧು ಮಿತ್ರರಿಗೆ 2 ದಿನಗಳ ಜೇನು ಕೃಷಿ ಕುರಿತು ತರಬೇತಿ ಕಾರ್ಯಗಾರ ವೀರಕಂಭ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.
ಮಜಿ ಶಾಲಾ ಮುಖ್ಯ ಶಿಕ್ಷಕಿ  ಬೆನಿಡಿಕ್ಟ್  ಕಾರ್ಯಕ್ರಮ ಉದ್ಘಾಟಿಸಿ ರೈತರು ಕಾರ್ಯಗಾರದ ಸದುಪಯೋಗ ಪಡೆದು ಕೊಂಡು ಉತ್ತಮ ಜೇನು ಕೃಷಿಕರಾಗಿ ಎಂದರು.


ವೀರಂಭ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ  ಬಂಟ್ವಾಳ ತಾಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್, ಬಂಟ್ವಾಳ ತಾಲೂಕು ಜೇನು ವ್ಯವಸಾಯ ಸಂಘದ ಅಧ್ಯಕ್ಷರಾದ  ಮೋಹನ್ ಪಿ. ಎಸ್, ವೀರಕಂಭ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಶಂಭು ಕುಮಾರ ಶರ್ಮಾ, ಜೇನು ಕೃಷಿ ಜಿಲ್ಲಾ ತರಬೇತುದಾರರಾದ  ರಾಧಾಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ತರಬೇತಿ ಕಾರ್ಯಕ್ರಮದಲ್ಲಿ ವೀರಕಂಭ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುಮಾರು 40 ಕ್ಕೂ ಆಸಕ್ತ ಕೃಷಿಕರು ಭಾಗವಹಿಸಿದ್ದರು. 

By Suddi9