
ಕರಾಚಿ: ಪಾಕಿಸ್ತಾನದ ವ್ಯಾಪಾರಿ ನಗರ ಕರಾಚಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 7 ಪೊಲೀಸ್ ಅಧಿಕಾರಿಗಳು ಮೃತಪಟ್ಟರೆ 33 ಜನರು ಗಾಯಗೊಂಡಿದ್ದಾರೆ.
ಪೊಲೀಸ್ ಅಧಿಕಾರಿಗಳನ್ನು ಹೊತ್ತ ಬಸ್ಗೆ ಡಿಕ್ಕಿ ಹೊಡೆದ ವ್ಯಾನ್ನಲ್ಲಿದ್ದ ಆತ್ಮಹತ್ಯಾ ಬಾಂಬರ್ ಸಿಡಿಸಿದ ಬಾಂಬ್ನಿಂದಾಗಿ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ರಾವ್ ಅನ್ವರ್ ತಿಳಿಸಿದ್ದಾರೆ. ಪೊಲೀಸ್ ತರಬೇತಿ ಕೆಂದ್ರದಿಂದ ಬಸ್ ಹೊರಬರುವುದನ್ನೇ ಕಾಯುತ್ತಿದ್ದ ವ್ಯಾನ್ನಲ್ಲಿದ್ದ ಉಗ್ರರು ಬಸ್ ಹೊರಬಂದ ತಕ್ಷಣ ಅದಕ್ಕೆ ತಮ್ಮ ವ್ಯಾನ್ನನ್ನು ಡಿಕ್ಕಿ ಹೊಡೆಸಿ ಈ ಸ್ಪೋಟ ನಡೆಸಿದ್ದಾರೆ. ಪಾಕಿಸ್ತಾನ ಸರಕಾರವು ಸ್ಥಳೀಯ ತಾಲಿಬಾನ್ ಸಂಘಟನೆ ಜೊತೆ ಶಾಂತಿ ಮಾತುಕತೆ ನಡೆಸಲು ಪ್ರಯತ್ನಿಸುತ್ತಿರುವ ಮಧ್ಯೆ ನಡೆಯುತ್ತಿರುವ ಸ್ಫೋಟಗಳ ಸರಣಿಯಲ್ಲಿ ಇದೂ ಕೂಡಾ ಒಂದಾಗಿದೆ
