ಕರಾಚಿ: ಪಾಕಿಸ್ತಾನದ ಕರಾಚಿಯ ವಿಶ್ವವಿದ್ಯಾಲಯದಲ್ಲಿ ಭಯೋತ್ಪಾದಕ ಸಂಘಟನೆ ಅಲ್-ಖೈದಾ ಸಕ್ರಿಯವಾಗಿರುವ ಬಗ್ಗೆ ತನಿಖೆ ನಡೆಸಲು ಸರಕಾರ ಆದೇಶ ಹೊರಡಿಸಿದೆ.
ಸಂಘಟನೆಯು ‘ಅಶಬ್’ ಎಂಬ ಹೆಸರಿನಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಕಾಯರ್ಾಚರಿಸುತ್ತಿರುವ ಬಗ್ಗೆ ಮಾಹಿತಿಗಳು ಲಭಿಸಿದ್ದು ಈ ಬಗ್ಗೆ ಪ್ಯಾರಾಮಿಲಿಟರಿ ರೇಂಜಸರ್್ ಮತ್ತು ಪೊಲೀಸ್ ಇಲಾಖೆಗೆ ಆಂತರಿಕ ಸಚಿವಾಲಯ ಪತ್ರ ಮುಖೇನ ತಿಳಿಸಿದೆ. ಈ ಬಗ್ಗೆ ಯಾವುದೇ ರೀತಿಯ ಸಹಕಾರ ಬೇಕಿದ್ದಲ್ಲಿ ವಿಶ್ವವಿದ್ಯಾಲಯದ ವೈಸ್ ಚಾಂಸೆಲರ್ ಜೊತೆ ಮಾತನಾಡುವಂತೆ ತಿಳಿಸಲಾಗಿದೆ.
ವಿಶ್ವವಿದ್ಯಾಲಯದಲ್ಲಿ ಕಾನೂನು ಬಾಹಿರ ವಿಷಯಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಕೂಡಲೇ ಅವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ಆಡಳಿತ ಮಂಡಳಿ ಸೂಚಿಸಿದೆ. ಈ ಹಿಂದೆ ನಿಷೇಧಿತ ತೆಹ್ರಿಕ್-ಎ-ತಾಲಿಬಾನ್ ಸಂಘಟನೆಯು ಕರಾಚಿ ಮೂಲಕ ಕಾಯರ್ಾಚರಿಸುತ್ತಿರುವುದನ್ನು ಪೊಲೀಸ್ ಇಲಾಖೆ ದೃಢಪಡಿಸಿತ್ತು. ಆದರೆ ಇದೀಗ ಮೊದಲ ಬಾರಿ ಆಂತರಿಕ ಸಚಿವಾಲಯ ವಿಶ್ವವಿದ್ಯಾಲಯದಲ್ಲಿ ಅಲ್-ಖೈದಾ ಸಂಘಟನೆ ಸಕ್ರಿಯವಾಗಿರುವ ಬಗ್ಗೆ ಮಾಹಿತಿ ನೀಡಿದೆ. ಕೆಲವು ತಿಂಗಳ ಹಿಂದೆ ಜಮಾತ್-ಎ-ಇಸ್ಲಾಂ ಸಂಘಟನೆಗೆ ಸೇರಿದ ಕೆಲವು ವಿದ್ಯಾಥರ್ಿಗಳನ್ನು ಅಲ್-ಖೈದಾದ ಜೊತೆ ಗುರುತಿಸಿಕೊಂಡಿದ್ದಾರೆ ಎಂಬ ಕಾರಣಕ್ಕಾಗಿ ಪಂಜಾಬ್ ವಿಶ್ವವಿದ್ಯಾಲಯದಿಂದ ಪೊಲೀಸರು ಬಂಧಿಸಿದ್ದರು.
