ಕಲ್ಲಡ್ಕ: ಶ್ರೀರಾಮ ಶಿಶುಮಂದಿರದ ವತಿಯಿಂದ ಪಾದಪೂಜೆ ಹಾಗೂ ಕೈತುತ್ತು ಕಾರ್‍ಯಕ್ರಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನಡೆಯಿತು. ಶಿಶುಮಂದಿರದ ಪುಟಾಣಿಗಳ ತಾಯಂದಿರು ತಾವು ತಂದಿರುವ ಹರಿವಾಣದಲ್ಲಿ ತಮ್ಮ ಪಾದವನ್ನು ಇಟ್ಟು ಆಸನದಲ್ಲಿ ಕುಳಿತುಕೊಂಡರು.WhatsApp Image 2022-03-18 at 3.34.51 PM

ತಾಯಂದಿರು ಕಾಣದಂತೆ ಮತ್ತು ಅವರ ಪಾದಗಳು ಮಾತ್ರ ಕಾಣುವಂತೆ ಅವರಿಗೆ ಪರದೆಯನ್ನು ಅಡ್ಡ ಹಿಡಿಯಲಾಯಿತು.  ಮಕ್ಕಳು ತಮ್ಮ ತಾಯಂದಿರ ಪಾದವನ್ನೇ ಗುರುತಿಸಿ ಕುಳಿತುಕೊಳ್ಳುತ್ತಿದ್ದರು. ನಂತರ ಅಡ್ಡವಾಗಿ ಇರಿಸಿದ್ದ ಪರದೆಯನ್ನು ಸರಿಸಲಾಯಿತು. ಪರದೆ ಸರಿದ ಬಳಿಕ ಮಕ್ಕಳು ತಾಯಿಯ ಪಾದ ತೊಳೆದು, ಅರಶಿನ ಕುಂಕುಮ ಹಚ್ಚಿ, ಹೂವಿನ ಆರ್ಚನೆ ಮಾಡಿ ಪಾದ ತೊಳೆದು ನಮಸ್ಕರಿಸಿದರು. ತಾಯಂದಿರು ಮಕ್ಕಳಿಗೆ ಅಕ್ಷತೆ ಹಾಕಿ ಆಶೀರ್ವದಿಸಿ ಸಿಹಿ ತಿನ್ನಿಸಿದರು, ಬಳಿಕ ಕೈತುತ್ತು ಕಾರ್ಯಕ್ರಮದಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಕೈತುತ್ತು ತಿನ್ನಿಸಿದರು.WhatsApp Image 2022-03-18 at 3.34.51 PM (1)

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ  ಶ್ರೀಮತಿ ವಿಂದ್ಯಾ.ಎಸ್.ರೈ ಇವರು ಮಾತಾನಾಡಿ ಇದೊಂದು ಭಾವನಾತ್ಮಕ ಕಾರ್ಯಕ್ರಮ ನಾನು ಇಲ್ಲಿಯವರೆಗೂ ಈ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಎಂದು ಹೇಳಿದರು. ಶ್ರೀರಾಮ ಪದವಿ ವಿಭಾಗದ ಉಪನ್ಯಾಸಕರಾದ ಭ|| ದಿವ್ಯಾಶ್ರೀ ಮಾತಾಜಿ ಇವರು ಕಾರ್ಯಕ್ರಮದ ಮಹತ್ವವನ್ನು ತಿಳಿಸಿಕೊಟ್ಟರು.WhatsApp Image 2022-03-18 at 3.34.45 PM

ತನ್ನ ಮಗು ತಮ್ಮ ಪಾದವನ್ನು ಹುಡುಕಿ ಪಾದಪೂಜೆ ಮಾಡಿರುವುದು ತಮ್ಮ ಸೌಭಾಗ್ಯ ಎಂದು ಮಾತೆಯರು ತಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಭ.ದಿವ್ಯಾ ಮಾತಾಜಿ ಸ್ವಾಗತಿಸಿ, ಭ.ಪೂರ್ಣಿಮಾ ಮಾತಾಜಿ ವಂದಿಸಿ, ಭ.ಲಕ್ಷಿತಾ ಮಾತಾಜಿ ವಂದಿಸಿದರುWhatsApp Image 2022-03-18 at 3.31.56 PM  WhatsApp Image 2022-03-18 at 3.31.55 PM

By suddi9

Leave a Reply

Your email address will not be published. Required fields are marked *