ಕಲ್ಲಡ್ಕ : ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಪ್ರತಿಭಾ ದಿನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದೀಪ ಪ್ರಜ್ವಲನ ಗೈದು ಬಹುಮಾನ ವಿತರಿಸಿದ ಹಿರಿಯ ವಿದ್ಯಾರ್ಥಿಡಾಕ್ಟರ್ ಸಿಂಧುಶ್ರೀ ಬಳ್ಳಕ್ಕುರಾಯ ಜೀವನದ ಮೌಲ್ಯಗಳನ್ನು ಮಾತೃಭಾಷೆಯ ಮಾತೃವಾತ್ಸಲ್ಯದಜೊತೆ ನೀಡುವ ಶ್ರೇಷ್ಠತೆ ಶ್ರೀರಾಮ ಪ್ರೌಢಶಾಲೆಎಂದು ಬಾಲ್ಯದ ನೆನಪಿನ ಬುತ್ತಿಯನ್ನು ವಿದ್ಯಾರ್ಥಿಗಳಿಗೆ ಹಂಚಿದರು.
ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಇನ್ನೋರ್ವ ಹಿರಿಯ ವಿದ್ಯಾರ್ಥಿ ಶ್ರೀ ಜಯ ಪ್ರಶಾಂತ್‌ಕೆಆರ್ ಮಾಲಕರು ಸ್ಟಾರ್‌ಗ್ರೂಪ್ ಮಂಗಳೂರು ಹಿರಿಯ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಘನತೆ ಶ್ರೀರಾಮ ಪ್ರೌಢಶಾಲೆಯದು ಈಗಿನ ವೇಗದ ಶಿಕ್ಷಣದಲ್ಲಿ ನಾವೆಲ್ಲರೂ ಹೊಂದಿಕೊಳ್ಳಲೇ ಬೇಕೆಂದು ಶುಭಾಶಯ ತಿಳಿಸಿದರು.
ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಾಂಭವಿ ಮಾತಾಜಿಅಧ್ಯಾಪಕರಿಗೆಅಧ್ಯಾಪನದ ಸಾಫಲ್ಯತೆಅವರ ಶಿಷ್ಯಂದಿರು ಅವರಿಗಿಂತಉನ್ನತ ಮಟ್ಟಕ್ಕೆಏರಿದಾಗಎಂದುಧನ್ಯತಾಭಾವ ತಿಳಿಸಿ ಶ್ರದ್ಧೆಯಿಂದ ಸಿಗುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ ಮುಂದಿನ ಶೈಕ್ಷಣಿಕ ಚಟುವಟಿಕೆಗಳು ಉಜ್ವಲ ವಾಗಲೆಂದು ಹರಸಿದರು ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀಮತಿ ಲಕ್ಷ್ಮೀ ರಘುರಾಜ್ ಹಾಗೂ ಶ್ರೀಮತಿ ಸುಹಾಸಿನಿ ಜಯ ಪ್ರಶಾಂತ್ ಉಪಸ್ಥಿತರಿದ್ದರು.
ವಿದ್ಯಾಕೇಂದ್ರದ ಸಂಸ್ಥಾಪಕರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದ ಶ್ರೀ ಡಾಕ್ಟರ್ ಪ್ರಭಾಕರ್ ಭಟ್‌ಕಲ್ಲಡ್ಕಇವರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನಗೈದು ರಂಜಿಸಿದರು ಬಹುಮಾನ ವಿಜೇತರ ಪಟ್ಟಿಯನ್ನು ಶ್ರೀ ಗೋಪಾಲ್ ಶ್ರೀಮಾನ್ ವಾಚಿಸಿ ಶ್ರೀಮತಿ ವಿನುತಾ ಲಕ್ಷಿ÷್ಮಮಾತಾಜಿ ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಿಸಿ ವಿದ್ಯಾರ್ಥಿಆದಿತ್ಯಕೃಷ್ಣ ನಿರೂಪಿಸಿ ಆತ್ರೇಯ ಸ್ವಾಗತಿಸಿ ಜಯಸೂರ್ಯ ವಂದಿಸಿದರು
