ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸುತ್ತಾ ‘ಸರ್ಸಿ.ವಿ ರಾಮನ್ರವರ ಸಾಧನೆಯೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆಗೆ ಕಾರಣವಾಯಿತು’ ಎಂದು ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿಯ ಮುಖ್ಯೋಪಾಧ್ಯಾಯರಾದ ಶ್ರೀ ರಾಧಕೃಷ್ಣ ಭಟ್ಇವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|ಪ್ರಭಾಕರ್ ಭಟ್ ಮಾತನಾಡುತ್ತಾ “ಭಾರತ ಶ್ರೇಷ್ಠ ವಿಜ್ಞಾನಿಗಳ ನಾಡು, ಮಕ್ಕಳಲ್ಲಿ ಹುಟ್ಟುವ ಕುತೂಹಲವೇ ವಿಜ್ಞಾನ. ಕುತೂಹಲವನ್ನು ಹೆಚ್ಚೆಚ್ಚು ಬೆಳೆಸಿಕೊಂಡಾಗ ಅವನು ವಿಜ್ಞಾನಿಯಾಗುವನು. ಭಾರತಜಗತ್ತಿಗೆ ಮಾನವೀಯತೆಯ ಜೊತೆಗೆ ವೈಜ್ಞಾನಿಕಕೊಡುಗೆಯನ್ನು ನೀಡಿದೆ” ಎನ್ನುತ್ತಾ ಮಕ್ಕಳೆಲ್ಲರೂ ವಿಜ್ಞಾನಿಗಳಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿರುವ NITK ಸುರತ್ಕಲ್ ಇಲ್ಲಿನ ರಸಾಯನ ಶಾಸ್ತ್ರ ವಿಭಾಗದ ಪ್ರೊಫೆಸರ್ಆಗಿರುವಶ್ರೀ ಅರುಣ್ ಎಂ ಇಸ್ಲೂರ್ ಇವರು “ಸಿ ವಿ ರಾಮನ್ ರವರು ಬ್ರಿಟಿಷ್ ಸರಕಾರದ ಉನ್ನತಅಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಾ ಮುಂಬಡ್ತಿಗೆ ಅರ್ಹತೆಯನ್ನು ಪಡೆದರೂ ಅದಕ್ಕೆ ರಾಜಿನಾಮೆ ನೀಡಿ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಸ್ವದೇಶದಲ್ಲಿಯೇ ಬೆಳಕಿನ ಚದರುವಿಕೆಗೆ ಕಾರಣವನ್ನು ಕಂಡುಕೊಳ್ಳುವುದರ ಮೂಲಕ ರಾಮನ್ ಪರಿಣಾಮವನ್ನು ಜಗತ್ತಿಗೆ ನೀಡಿದರು.
ಹಾಗೆಯೇ ಭಾರತೀಯ ಯುವಕಯುವತಿಯರು ತಂದೆತಾಯಿ, ಗುರುಗಳಿಗೆ ಗೌರವಕೊಟ್ಟು ನಮ್ಮ ರಾಷ್ಟ್ರ, ನೆಲ, ಭಾಷೆ ಇವುಗಳ ಮೇಲೆ ಅಭಿಮಾನ ಇಟ್ಟು ಪರಿಸರ ನೆಲ ವಿದ್ಯುತ್ ಉಳಿಸಿ ಮಾನವ ಕುಲಕ್ಕೆ ಒಳಿತಾಗುವ ಸಂಶೋಧನೆಗಳನ್ನು ಕೈಗೊಳ್ಳುವಂತೆ ಕರೆ ಇತ್ತರು”.
ವೇದಿಕೆಯಲ್ಲಿಕರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಹನಿರ್ದೇಶಕರು ಆರ್ಯಭಟ ಪ್ಲಾನಿಟೋರಿಯಮ್ ಬೆಂಗಳೂರು, ಶ್ರೀ ಲಕ್ಷ್ಮೀಪತಿ, ಸಂಸ್ಥೆಯ ಸಂಚಾಲಕರಾದ ಶ್ರಿ ವಸಂತಮಾಧವ, ಸಹ ಸಂಚಾಲಕರಾದ ಶ್ರೀ ರಮೇಶ್ ಎನ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶ್ರೀ ಸತೀಶ್ರಾವ್ ಮತ್ತು ಪ್ರೌಢಶಾಲೆಯ ಮುಖ್ಯೋಪಾಧ್ಯಾರಾದ ಶ್ರೀಮತಿ ಶಾಂಭವಿ ಮಾತಾಜಿ ಉಪಸ್ಥಿತರಿದ್ದರು. ಕರ್ಯಕ್ರಮದ ನಿಮಿತ್ತ ಏಪರ್ಡಿಸಿದ ವಿವಿಧ ಸ್ಪರ್ಧೆಗಳಲ್ಲಿ ೨೦ ಪ್ರಾಥಮಿಕ ಶಾಲೆಯ ೨೬೭ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದರು.
ಅಟಲ್ ಟಿಂಕರಿಂಗ್ ಲ್ಯಾಬ್ನಲ್ಲಿ ಎರ್ಪಡಿಸಿದ ಪ್ರದರ್ಶಿನಿಯನ್ನು ಅತಿಥಿಗಳು ಹಾಗೂ ಆಗಮಿಸಿದ ಎಲ್ಲರೂ ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರೌಢಶಾಲೆಯ ನಿವೃತ್ತ ಹಿಂದಿ ಅಧ್ಯಾಪಕಾರದ ಗೋವಿಂದ ಭಟ್ ಇವರು ಉಪಸ್ಥಿತರಿದ್ದು ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಅಟಲ್ಟಿಂಕರಿಂಗ್ ಲ್ಯಾಬ್ನಲ್ಲಿ ರಾಕೇಟ್ ತಯಾರಿಕರ್ಯಾಗಾರ ಹಾಗೂ ವಿಡಿಯೋ ಪ್ರದರ್ಶನ ನಡೆಯಿತು. ಕರ್ಯಕ್ರಮದ ಕೊನೆಯಲ್ಲಿ ರಾಕೆಟ್ ಉಡಾವಣಾಪ್ರಾತ್ಯಕ್ಷಿಕೆ ನಡೆಯಿತು. ಶಾಲಾ ವಿದ್ಯಾರ್ಥಿಯಾದ ರಂಜಿತ್ ಇವರು ಸ್ವತಃ ತಯಾರಿಸಿದ ವಿಮಾನ ಹಾರಾಟದ ಪ್ರದರ್ಶನ ಎಲ್ಲರ ಮೆಚ್ಚುಗೆ ಪಡೆಯಿತು.
ಕು.ಅನುಷಾ ಇವರು ಸಿ.ವಿ ರಾಮನ್ ರವರ ಜೀವನ ಮತ್ತು ಸಾಧನೆಯನ್ನು ವಿವರಿಸಿದರು. ಕರ್ಯಕ್ರಮವನ್ನುಕು.ಚಿನ್ಮಯಿ ನಿರೂಪಿಸಿ, ಕು.ಅನುಷಾ ಸ್ವಾಗತಿಸಿ, ಕು.ಚೈತ್ರಾ ವಂದಿಸಿದರು.

