ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎ 01 ರಂದು “ಆರೋಗ್ಯ ಮಾಹಿತಿಕಾರ್ಯಕ್ರಮ” ನಡೆಯಿತು. ವಿಟ್ಲ, ಸಮುದಾಯ ಆರೋಗ್ಯಕೇಂದ್ರದ ಆರ್.ಕೆ.ಎಸ್.ಕೆ ಕೌನ್ಸಿಲರ್ ‌ಆಗಿರುವ ಶ್ರುತಿಶೆಟ್ಟಿ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಪೌಢಾವಸ್ಥೆಗೆ ಬಂದಾಗದೇಹದಲ್ಲಿ ಉಂಟಾಗುವ ಬದಲಾವಣೆ, ದೈಹಿಕ ಹಾಗೂ ಮಾನಸಿಕ ಸ್ವಚ್ಛತೆ, ಅಪರಿಚಿತರೊಂದಿಗೆತಮ್ಮ ವರ್ತನೆ, ಮಾನಸಿಕ ನಿಯಂತ್ರಣದೊಂದಿಗೆ ಹೆಣ್ಣುಮಕ್ಕಳ ಸಮಸ್ಯೆಗಳಿಗೆ ಪರಿಹಾರ ತಿಳಿಸಿದರು.

IMG-20210401-WA0011

ಬಾಳ್ತಿಲ ಆರೋಗ್ಯ ಕೇಂದ್ರದ ವೀರೇಶ್‌ ಮಾತನಾಡುತ್ತಾ, ಕೋರೋನ ಲಸಿಕೆಯನ್ನು ನಿಮ್ಮ ಮನೆಯಲ್ಲಿರುವ ೪೫ ವರ್ಷದ ಹಿರಿಯರಿಗೆ ಹಾಕಿಸುವಂತೆ ಮಕ್ಕಳಲ್ಲಿ ಮನವಿ ಮಾಡಿದರು. ಹಾಗೂ ಕೋರೊನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತುಕೊರೊನ ಲಸಿಕೆ ಹಾಕಿಸಲು ಶ್ರೀರಾಮ ವಿದ್ಯಾಕೇಂದ್ರ ನೀಡಿದ ಬಸ್ಸಿನ ವ್ಯವಸ್ಥೆಗೆಕೃತಜ್ಞತೆ ಸಲ್ಲಿಸಿದರು.

IMG-20210401-WA0025

ಹೆಣ್ಣುಮಕ್ಕಳ ಸುರಕ್ಷೆಯ ನಿಟ್ಟಿನಲ್ಲಿ ಶಾಲೆಯ ಪೋಷಕರು, ಶಿಕ್ಷಕರು ಮತ್ತುವಿದ್ಯಾರ್ಥಿಗಳನ್ನೊಳಗೊಂಡ ಸುರಕ್ಷಾ ಸಮಿತಿಯನ್ನುರಚಿಸಲಾಯಿತು. ವೇದಿಕೆಯಲ್ಲಿ ಮಾತೃಭಾರತಿ ಸಮಿತಿಯ ಸದಸ್ಯರಾದ ಮಮತಾ ಹಾಗೂ ಸ್ವಾತಿ ಮತ್ತುಮುಖ್ಯೋಪಾಧ್ಯಯರಾದ ರವಿರಾಜ್‌ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಪ್ರೀತಾ ನಿರೂಪಿಸಿ, ಸುಮಂತ್ ಆಳ್ವ ಸ್ವಾಗತಿಸಿ ವಂದಿಸಿದರು.

IMG20210401101014

By suddi9

Leave a Reply

Your email address will not be published. Required fields are marked *