ಕಲ್ಲಡ್ಕ : ೨೦೨೦-೨೧ನೇ ಸಾಲಿನ ಎಸ್.ಎಸ್.ಎಲ್.ಸಿಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿ ಪರೀಕ್ಷೆಗೆ ಹಾಜರಾದ ೨೯೦ ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಶೇ.೧೦೦ ಫಲಿತಾಂಶ ಗಳಿಸಿರುತ್ತದೆ. ಶೇ.೮೦ ಗುಣಾತ್ಮಕ ಫಲಿತಾಂಶಗಳಿಸಿ ಗ್ರೇಡ್ ಪಡೆದಿರುತ್ತದೆ.01ರಿಧೀಶ ೬೨೫ ರಲ್ಲಿ ೬೧೭ ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಹಾಗೂ ಗಣಿತ & ತೃತೀಯಕನ್ನಡ ವಿಷಯದಲ್ಲಿ ೧೦೦ಅಂಕಗಳನ್ನು ಪಡೆದಿರುತ್ತಾಳೆ, ತೃಪ್ತಿ ಮತ್ತು ಭೂಮಿಕ ಇಬ್ಬರು ೬೧೫ ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ತೃಪ್ತಿ ತೃತೀಯ ಕನ್ನಡ & ಗಣಿತ ವಿಷಯದಲ್ಲಿ ೧೦೦ ಅಂಕಗಳು ಮತ್ತು ಭೂಮಿಕ ಗಣಿತ & ವಿಜ್ಞಾನ ವಿಷಯದಲ್ಲಿ ೧೦೦ ಅಂಕಗಳನ್ನು ಪಡೆದಿರುತ್ತಾರೆ, ಧನ್ಯಶ್ರೀ ೬೧೪ ಅಂಕಗಳನ್ನು ಪಡೆದು ತೃತೀಯ ಸ್ಥಾನ ಹಾಗೂ ಇಂಗ್ಲೀಷ್, ತೃತೀಯ ಕನ್ನಡ & ವಿಜ್ಞಾನ ವಿಷಯದಲ್ಲಿ ೧೦೦ ಅಂಕಗಳನ್ನು ಪಡೆದಿರುತ್ತಾಳೆ,02ಹಾಗೂ ಪೂರ್ಣಶ್ರೀ ರೈ ಸಂಸ್ಕೃತ ೧೨೫ ಹಾಗೂ ಇಂಗ್ಲೀಷ್ & ಗಣಿತ ವಿಷಯದಲ್ಲಿ ೧೦೦ ಅಂಕಗಳು, ಸುಶ್ರುತ್‌ಎಸ್.ಕೊಟ್ಟಾರಿ ವಿಜ್ಞಾನ & ಸಮಾಜ ವಿಷಯದಲ್ಲಿ ೧೦೦ ಅಂಕಗಳು, ಗೌತಮಿ & ಕೀರ್ತನಾ ಕನ್ನಡ ವಿಷಯದಲ್ಲಿ ೧೨೫ ಅಂಕಗಳು, ಪಲ್ಲವಿ, ಶಮಾತ್ಮಿಕ, ಶಿಪಾಲಿ, ಸ್ವಸ್ತಿಕಾ, ಮಿಥೇಶ್ ವಿ.ನಾಯ್ಕ, ಸೃಜನ್‌ ತೃತೀಯ ಕನ್ನಡ ವಿಷಯದಲ್ಲಿ ೧೦೦ ಅಂಕಗಳು, ಶರಣ್ಯ ಕೆ &ಯಜ್ಞೇಶ್ ಸಮಾಜ ವಿಷಯದಲ್ಲಿ ೧೦೦ ಅಂಕಗಳು, ಶಿವಾನಿ & ರಾಹುಲ್ ವಿಜ್ಞಾನ ವಿಷಯದಲ್ಲಿ ೧೦೦ ಅಂಕಗಳು, ಹಾಗೂ ಪ್ರಜ್ಞಾ ಹಿಂದಿ ವಿಷಯದಲ್ಲಿ ೧೦೦ ಅಂಕಗಳನ್ನು ಪಡೆದಿರುತ್ತಾರೆ. 03೯ ವಿದ್ಯಾರ್ಥಿಗಳು ೬೦೦ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುತ್ತಾರೆ. ಒಟ್ಟು ೪೧ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ೧೪೩ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೮೫ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು ೨೧ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. 04ಇವರಿಗೆ ಶ್ರೀರಾಮ ವಿದ್ಯಾಕೇಂದ್ರ–ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಶಾಲಾಭಿವೃದ್ಧಿ ಸಮಿತಿ, ಮುಖ್ಯೋಪಾಧ್ಯಾಯರು, ಅಧ್ಯಾಪಕರು, ಹಾಗೂ ಅಧ್ಯಾಪಕೇತರರುಅಭಿನಂದನೆ ಸಲ್ಲಿಸಿರುತ್ತಾರೆ.05

By suddi9

Leave a Reply

Your email address will not be published. Required fields are marked *