ಮುಂಬಯಿ : ಕೂಟ ಮಹಾಜಗತ್ತು ಮುಂಬಯಿ ಅಂಗ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಪಿ.ವಿ ಐತಾಳ ಪ್ರಸಿದ್ಧಿಯ ಪಣಂಬೂರು ವಾಸುದೇವ ಐತಾಳ್ (೭೯.) ಅಲ್ಪಕಾಲದ ಅನಾರೋಗ್ಯದಿಂದ ಇಂದಿಲ್ಲಿ ಮಂಗಳವಾರ ಮುಂಜಾನೆ ಅಂಧೇರಿ ಪಶ್ಚಿಮದ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು.P V Aithal A3

ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲ) ಸಂಸ್ಥೆಯಲ್ಲಿ ಸುಮಾರು ಐದು ದಶಕಗಳಿಂದಲೂ ಸಕ್ರೀಯ ಸದಸ್ಯರಾಗಿದ್ದು, ಚುನಾವಣಾ ಅಧಿಕಾರಿ ಆಗಿಯೂ ಶ್ರಮಿಸಿದ್ದರು. ಸಮಾಜ ಸೇವಕರಾಗಿರೂ ಅಪ್ರತಿಮ ಹಿರಿಯ ರಂಗನಟರಾಗಿದ್ದು ಸದಾನಂದ ಸುವರ್ಣ, ಸುರೇಶ್ ಆನಗಳ್ಳಿ, ಮೋಹನ್ ಮಾರ್ನಾಡ್, ರಮೇಶ್ ಶಿವಪುರ, ಡಾ| ಭರತ್‌ಕುಮಾರ್ ಪೊಲಿಪು ಮೊದಲಾದವರ ನಿರ್ದೇಶಿತ ನಾಟಕಗಳಲ್ಲಿ ಅಭಿನಯಿಸಿದ್ದರು.

ದ.ಕ ಜಿಲ್ಲೆಯ ಮಂಗಳೂರು ಪಣಂಬೂರು ಮೂಲತಃ ಮೃತರು ಎರಡು ಹೆಣ್ಣು, ಓರ್ವ ಗಂಡು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

By Suddi9

Leave a Reply

Your email address will not be published. Required fields are marked *