ಮುಂಬಯಿ: ನಿವೃತ್ತ ಶಿಕ್ಷಕ ಚಾರ್ಲ್ಸ್ ಗೊನ್ಸಾಲ್ವ್ವಿಸ್ (೮೭.) ವೃದ್ಧಾಪ್ಯ ಸಹಜ ಅಸ್ವಸ್ಥತೆಯಿಂದ ತನ್ನ ಸ್ವಗೃಹ ಬೆಳ್ತಂಗಡಿ ಮಡಂತ್ಯಾರು ಆರ್ತಿಲ್ ಇಲ್ಲಿನ ಗೋಲ್ಡನ್ ಚಾರ್ಮ್ಸ್ ನಿವಾಸದಲ್ಲಿ ಮಾ.೨೬ ರಂದು ನಿಧನರಾದರು. ಧರ್ಮಗುರು ರೆ| ಫಾ| ಡಾ| ಆರ್ಚಿಬಾಲ್ಡ್ ಗೊನ್ಸಾಲ್ವಿಸ್ (ಒಸಿಡಿ), ಡಾ| ರಿಚಾರ್ಡ್ ಗೊನ್ಸಾಲ್ವಿಸ್ ಇಬ್ಬರು ಸುಪುತ್ರರು, ಸೇರಿದಂತೆ ನಾಲ್ಕು ಸುಪುತ್ರಿಯರು ಸೇರಿದಂತೆ ಬಂಧು ಬಳಗ ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇದೇ ಮಾರ್ಚ್೨೮ರ ಭಾನುವಾರ ಅಪರಾಹ್ನ ೪.೦೦ ಗಂಟೆಗೆ ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರು ಇಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
