ನವದೆಹಲಿ : ದಿನದಿಂದ ದಿನಕ್ಕೆ ಇರಾನ್-ಅಮೆರಿಕ ಕಾದಾಟದ ಕಾವು ಹೆಚ್ಚಾಗಿದ್ದು. ಇದೀಗ ಇರಾನ್ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಖಂಡಾಂತರ ಕ್ಷಿಪಣಿ ದಾಳಿಯನ್ನು ನಡೆಸಲಾಗಿದೆ. ಇರಾಕಿನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ 12ಕ್ಕೂ ಅಧಿಕ ಖಂಡಾಂತರ ದಾಳಿ ನಡೆಸಲಾಗಿದೆ. ಈ ಮೂಲಕ ಇರಾನ್ ತನ್ನ ಸೇನಾ ಮುಖ್ಯಸ್ಥ ಖಾಸಿಂ ಸುಲೈಮಾನಿಯ ಹತ್ಯೆಯ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದೆ. ಅದಲ್ಲದೆ ರಾಕೆಟ್ ದಾಳಿ ನಡೆದಿರುವುದನ್ನು ಪೆಂಟಗಾನ್ ಖಚಿತಪಡಿಸಿದೆ.
ಅಮೆರಿಕದ ಪಡೆಗಳು ದೇಶ ತೊರೆಯಬೇಕು ಎಂದು ಇರಾಕ್ ಸಂಸತ್ ನಿರ್ಣಯ ಮಂಡನೆ ಮಾಡಿತ್ತು. ಒಂದು ವೇಳೆ ಅಮೆರಿಕದ ಪಡೆಗಳನ್ನು ಬಲವಂತದಿಂದ ಹೊರ ಹಾಕಿದರೆ ಇರಾಕ್ ಮೇಲೆ ನಿರ್ಬಂಧ ಹೇರುತ್ತೇವೆ ಎಂದು ಅಮೆರಿಕ ಹೇಳಿತ್ತು.ಇರಾಕ್‌ನಲ್ಲಿನ ಅತ್ಯಾಧುನಿಕ ಮತ್ತು ಅತಿ ದುಬಾರಿ ವಾಯುನೆಲೆಯನ್ನು ಅಮೆರಿಕ ನಿರ್ಮಾಣ ಮಾಡಿದೆ.
ಇರಾನ್ ಈ ನೆಲೆಗಳನ್ನು ಗುರಿಯಾಗಿಸಿಕೊಂಡು ರಾಕೆಟ್ ದಾಳಿ ನಡೆಸಿದೆ. ಇರಾನ್ ಬಿಕ್ಕಟ್ಟಿನ ಕುರಿತು ಚರ್ಚಿಸಲು ಈಗಾಗಲೆ ನ್ಯಾಟೊ ದೇಶದ ರಾಯಭಾರಿಗಳು ಸಭೆಯನ್ನ ನಡೆಸಿದ್ದರೂ ಕೂಡ.ಇರಾನ್ ಸೇನಾ ಮುಖ್ಯಸ್ಥ ಸುಲೈಮಾನಿ ಹತ್ಯೆಯ ಬಳಿಕ ಇರಾನ್ ಮತ್ತು ಅಮೆರಿಕಾದ ಸಂಬಂಧ ಹದಗೆಟ್ಟಿದ್ದು ಸರಿಯಾಗುವ ಸಣ್ಣ ಸೂಚನೆಯೂ ಕಾಣುತ್ತಿಲ್ಲ.
ಖಂಡಾಂತರ ಕ್ಷಿಪಣಿ ದಾಳಿಯ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ನಲ್ಲಿ “ಆಲ್ ಇಸ್ ವೆಲ್’! ಇರಾಕ್ ನಲ್ಲಿರುವ ಅಮೆರಿಕಾದ ವಾಯುನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ದಾಳಿಯಲ್ಲಿ ಆಗಿರುವ ನಷ್ಟ ಹಾಗೂ ಸಾವು,ನೋವುಗಳ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಇಲ್ಲಿಯವರೆಗೂ ಎಲ್ಲವೂ ಉತ್ತಮವಾಗಿದೆ! ವಿಶ್ವದಲ್ಲಿಯೇ ಅತ್ಯಂತ ಶಕ್ತಿಶಾಲಿ ಹಾಗೂ ಶಸ್ತ್ರಸಜ್ಜಿತ ಸೇನೆ ನಮ್ಮದು”.
ಎಂದು ಟ್ವಿಟ್ ಮಾಡಿದ್ದರೆ ,ಇತ್ತ ಇರಾನ್ ನ ವಿದೇಶಾಂಗ ಸಚಿವ ಜಾವದ್ ಜಾಫಿರ್ “ನಾವು ಯುದ್ಧವನ್ನು ಬಯಸುವುದಿಲ್ಲ, ಆದರೆ ಆಕ್ರಮಣಶೀಲತೆಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಬಯಸುತ್ತೇವೆ, ಹೀಗಾಗಿ ಅಮೆರಿಕಾದ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದ್ದೇವೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದು ಯುದ್ದದ ಕಾವು ಮತ್ತೆ ಹೆಚ್ಚಿಸುವಂತೆ ಮಾಡಿದೆ.

