Published On: Wed, Jan 8th, 2020

180 ಪ್ರಯಾಣಿಕರಿದ್ದ ಉಕ್ರೇನ್ ವಿಮಾನ , ಟೆಹ್ರಾನ್ ನಲ್ಲಿ ಪತನ

ಟೆಹ್ರಾನ್: ಉಕ್ರೇನ್ ದೇಶಕ್ಕೆ ಸೇರಿದ ವಿಮಾನವೊಂದು ಪತನವಾಗಿದೆ. 180 ಮಂದಿ ಪ್ರಯಾಣಿಕರು ಹಾಗು ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ಬೋಯಿಂಗ್ 737 ಎಂಬ ಉಕ್ರೇನ್ ವಿಮಾನ ಟೆಹ್ರಾನ್ ನಲ್ಲಿ ಪತನವಾಗಿದೆ. ಇರಾನ್ ನ ರಾಜಧಾನಿ ಟೆಹ್ರಾನ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದವರೆಲ್ಲರೂ ಮೃತಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮ ವರದಿ ಮಾಡಿದೆ.

download (2)
ಟೆಹ್ರಾನ್ ನ ಇಮಾಮ್ ಖೊಮೈನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಬೋಯಿಂಗ್ 737-800 ವಿಮಾನ ಟೆಹ್ರಾನ್ ವಿಮಾನ ನಿಲ್ದಾಣ ಸಮೀಪ ಟೇಕ್ ಆಫ್ ಆಗಿತ್ತು, ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಅಪಘಾತಕ್ಕೀಡಾಗಿತ್ತು. ಇದು ತಾಂತ್ರಿಕ ತೊಂದರೆಯಿಂದ ಅಪಘಾತಕ್ಕೀಡಾಗಿರಬಹುದು. ಅದಲ್ಲದೆ ಉಕ್ರೇನ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲಿ ಸಂದೇಶ ರವಾನಿಸುವುದನ್ನು ಕೂಡ ಈ ವಿಮಾನ ನಿಲ್ಲಿಸಿತು ಎಂದು ಫೈಟ್ ರಾಡಾರ್ 24 ವೆಬ್ ಸೈಟ್ ವರದಿ ಮಾಡಿದೆ. ಈ ಅಪಘಾತದಲ್ಲಿ ಸುಮಾರು 180 ಮಂದಿ ಸಾವನಪ್ಪಿದ್ದಾರೆ, ರಕ್ಷಣಾ ತಂಡ ಮೃತ ಶರೀರಗಳನ್ನು ಹೊರತೆಗೆಯಲು ನೋಡುತ್ತಿದೆ. ತನಿಖಾ ತಂಡ ಸದ್ಯ ಘಟನೆ ನಡೆದಂತ ಸ್ಥಳದಲ್ಲಿ ತನಿಖೆ ನಡೆಸುತ್ತಿದೆ ಎಂದು ನಾಗರಿಕ ವಿಮಾನಯಾನ ವಕ್ತಾರ ರೆಜಾ ಜಾಫರ್ಜಾಡೆ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter