ಬಡಗಬೆಳ್ಳೂರು: ಶಿಥಿಲಾವಸ್ಥೆಯಲ್ಲಿರುವ ಬಡಗಬೆಳ್ಳೂರು ಗ್ರಾಮದ ಪ್ರಸಿದ್ಧ ಆರಾಧನಾ ಕೇಂದ್ರ ಶ್ರೀ ಮಹಮ್ಮಾಯಿ ದೇವಸ್ಥಾನದ ಬಗ್ಗೆ 2015ರಲ್ಲಿ ಪ್ರಶ್ನೆ ಇಟ್ಟು ಕೇಳಲಾದ ಪ್ರಕಾರ, ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರ ಮೂಲಕ ಜೀರ್ಣೋದ್ಧಾರ ನಡೆಸಲು ನಿರ್ಧರಿಸಲಾಗಿದ್ದು, ಅಂತೆಯೇ ಭಾನುವಾರ ಸಕಲ ಧಾರ್ಮಿಕ ಕಾರ್ಯಗಳೊಂದಿಗೆ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ದೇವಸ್ಥಾನದ ಮಾಡನ್ನು ಗೋವಿನ ಮೂಲಕ ತೆಗೆಯಲಾಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್. ಶೆಟ್ಟಿ ಮಾತಾಡಿ, ಕಳೆದ ಮೂರು ವರ್ಷಗಳಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ನಿರೀಕ್ಷಿತ ದೇಣಿಗೆ ಸಂಗ್ರಹವಾಗದೆ ಕಾಮಗಾರಿ ಆರಂಭಗೊಂಡಿರಲಿಲ್ಲ. ಆದರೆ ಕಾಮಗಾರಿಗಾಗಿ 20 ಲಕ್ಷ ರೂ ವೆಚ್ಚದ ಮರ ಹಾಗೂ ಶಿಲೆ ಕಲ್ಲು ಸಂಗ್ರಹಿಸಲಾಗಿದೆ. ದೇವಸ್ಥಾನದ ಜೀರ್ಣೋದ್ಧಾರ ದೆಸೆಯಲ್ಲಿ ಕಳೆದ ವರ್ಷ ಡಿಸೆಂಬರ್ 18ರಂದು ಮತ್ತೊಮ್ಮೆ ಊರವರ ಸಭೆ ಕರೆದು ಜನವರಿ 20ರಂದು ಬೆಳಿಗ್ಗೆ 9.30ಕ್ಕೆ ದೇವರಗುಡಿಯಲ್ಲಿ ಸಂಕೋಚ ನಡೆಸಿ ಬಾಲಾಲಯದಲ್ಲಿ ದೇವರ ಪ್ರತಿಷ್ಠಾಪನೆಗೆ ನಿರ್ಧಸಲಾಯಿತು.
ದೇವಾಲಯದ ಜೀರ್ಣೋದ್ಧಾರಕ್ಕೆ ಊರಿನ ಭಕ್ತರ ದೇಣಿಗೆಯೇ ತಳಹದಿಯಾಗಿದೆ. ಹಾಗಾಗಿ ಊರಿನ ಪ್ರತಿ ಮನೆಯವರು ತಲಾ ರೂ. 10,000 ರೂನಿಂದ 25,000 ರೂ ಮೇಲ್ಪಟ್ಟ ದೇಣಿಗೆ ನೀಡುವಂತೆ ವಿನಂತಿಸಲಾಗಿದೆ. ಉಳಿದಂತೆ ದಾನಿಗಳು ಇಚ್ಚಿಸಿದಲ್ಲಿ ದೇವಾಲಯ ಜೀರ್ಣೋದ್ಧಾರದಲ್ಲಿ ಯಾವುದಾದರೂ ಕಾಮಗಾರಿಯ ಪೂರ್ಣ ಆರ್ಥಿಕ ಜವಾಬ್ದಾರಿ ತೆಗೆದುಕೊಳ್ಳಲು ಅವಕಾಶವಿದೆ. ಮುಂದಿನ ಐದು ತಿಂಗಳಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಪೂರ್ಣಗೊಳಿಸಿ, ಬ್ರಹ್ಮಕಲಶೋತ್ಸವ ನಡೆಸಲಿಚ್ಚಿಸಲಾಗಿದೆ. ಇದು ನಮ್ಮ ಜೀವಿತಾವದಿಯಲ್ಲಿ ಒದಗಿ ಬರುವ ಒಂದು ಅಪೂರ್ವ ದೈವಿಕ ಕಾರ್ಯವಾಗಿದ್ದು, ಊರವರೆಲ್ಲರೂ ಇದರಲ್ಲಿ ಶ್ರದ್ಧಾಭಕ್ತಿಯಿಂದ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮೇ ಒಳಗಡೆ ಜೀರ್ಣೋದ್ಧಾರ ಕಾರ್ಯ ಅಂತಿಮಗೊಳ್ಳಲು ಸಹಕರಿಸಬೇಕು ಎಂದು ಅವರು ತಿಳಿಸಿದರು.

ತಂತ್ರಿ ಉದಯ ಪಾಂಗಣ್ಣಾಯ, ಅರ್ಚಕ ಪ್ರಕಾಶ್ ಭಟ್, ರಘು ಎಲ್ ಶೆಟ್ಟಿ, ಬಾರಿಭಂಡಾರಿ, ಗಂಗಾಧರ ಪೂಜಾರಿ, ಕಿಶೋರ್ ಭಂಡಾರಿ, ಸವಿತಾ ಶೆಟ್ಟಿ, ವೀಣಾ ಭಟ್ ಹಾಗೂ ಸ್ಥಳೀಯರಾದ ಮಾಡ್ಲಾಯ ದೈವ ಪಾತ್ರಿ ಚಂದ್ರಶೇಖರ ಅಜಿಲ ಶ್ರೀಮಹಮ್ಮಾಯಿ ದೇವಸ್ಥಾನದ ಶ್ರೀನಿವಾಸ ದಾಸಯ್ಯ ಹಾಗೂ ಸ್ಥಳೀಯರಾದ ಸೀತಾರಾಮ ಪೂಂಜ, ಪ್ರಕಾಶ್ ಆಳ್ವ, ಉಮೇಶ್ ಶೆಟ್ಟಿ ಪರಿಮೊಗರು,ದೇವಪ್ಪ ಪೂಜಾರಿ, ನಂದಪ್ಪ ರೈ, ರಮೇಶ್ ಬಟ್ಟಾಜೆ, ಕೃಷ್ಣಪ್ರಸಾದ್ ಆಳ್ವ, ಸಚೀಂದ್ರನಾಥ ರೈ,ಬಾಲಕೃಷ್ಣಶೆಟ್ಟಿ ಗುಂಡಾಲ,ಗಂಗಾಧರ ರೈ, ಕರುಣಾಕರ ,ಅನಂತ ಭಟ್, ಸಚಿಂದ್ರನಾಥ ಭಂಡಾರಿ,ದಯಾನಂದ ಬೆಳ್ಳೂರು, ಶಶಿಕಿರಣ್ ಬೆಳ್ಳೂರು,ಜಯರಾಮ ಶೆಟ್ಟಿ, ಸದಾಶಿವ ಶೆಟ್ಟಿ, ಸುಂದರ ಶೆಟ್ಟಿ,ಗಂಗಯ್ಯ ಪೂಜಾರಿ ಕಮ್ಮಾಜೆ, ತಿಮ್ಮಪ್ಪ ಕಮ್ಮಾಜೆ, ಪ್ರಕಾಶ್ ಬೆಳ್ಳೂರು, ಪ್ರಸನ್ನ , ಯುವರಾಜ ಪೂಂಜ,ನಾರಾಯಣ ಶೆಟ್ಟಿ, ದಿನೇಶ್, ಪ್ರವೀಣ್ ಪರಕೂರು, ಈಶ್ವಂಬರ ವರಕೋಡಿ,ಪ್ರವೀಣ್ ಶೆಟ್ಟಿ, ವಸಂತ ಪೂಜಾರಿ,ಸಾಕೇತ್ ಭಂಡಾರಿ , ಶ್ಯಾಮ್ ರಾಯ ಆಚಾರ್ಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
