ಬಂಟ್ವಾಳ : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಯವರ 78 ನೇ ಜನ್ಮದಿನದ ಪ್ರಯುಕ್ತ ಸೇವಾ ಯೋಜನೆಯ ಅಂಗವಾಗಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನ ಕಚೇರಿ ವ್ಯಾಪ್ತಿಯ, ತುಂಬೆ ವಲಯದ ವತಿಯಿಂದ ಜನಜಾಗೃತಿ ವೇದಿಕೆ,ಪ್ರಗತಿ ಬಂದು ಸ್ವಸಹಾಯ ಸಂಘಗಳ ಸದಸ್ಯರು, ನವ ಜೀವನ ಸಮಿತಿ ಸದಸ್ಯರು, ಹೆಗ್ಗಡೆ ಅಭಿಮಾನಿಗಳ ಬಳಗದಿಂದ ಬಂಟ್ವಾಳ ತಾಲೂಕು ನೆತ್ತರಕೆರೆ ಶ್ರಾವ್ಯ ಗೋಕುಲ ಗೋ ಮಂದಿರದಲ್ಲಿ ಗೋಪೂಜೆ ನೆರವೇರಿಸಿ, ಮೇವು ಹಾಗೂ ಹಸಿರು ಹುಲ್ಲು ವಿತರಿಸ ಲಾಯಿತು.

ಜನಜಾಗೃತಿ ವೇದಿಕೆ ಸದಸ್ಯ ಬಾಸ್ಕರ್ ಚೌಟ, ಗೋಶಾಲೆಯ ಪ್ರಮುಖ ರಾದ ನಾರಾಯಣ ಹೊಳ್ಳ, ಐತಪ್ಪ ಅಳ್ವ ಸುಜೀರ್ ಗುತ್ತು, ಪದ್ಮನಾಭ ಗೋವಿನ ತೋಟ, ಯೋಜನೆಯ ತಾಲೂಕು ಯೋಜನಾಧಿಕಾರಿ ಜಯನಂದ ಪಿ, ತುಂಬೆ ವಲಯ ಮೇಲ್ವಿಚಾರಕ್ಕೆ ಮಮತಾ, ಒಕ್ಕೂಟಗಳ ಅಧ್ಯಕ್ಷರುಗಳು, ಸೇವಾ ಪ್ರತಿನಿಧಿಗಳು, ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ತಾಲೂಕು ಆಸ್ಪತ್ರೆಗೆ ಬೆಡ್ ಶೀಟ್ ವಿತರಣೆ:-
ಅದೇ ರೀತಿ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳ ಅನುಕೂಲಕ್ಕಾಗಿ ಬೆಡ್ಶೀಟ್ಗಳನ್ನು ವಿತರಿಸಲಾಯಿತು.ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಐತಪ್ಪ ಆಳ್ವ ಅವರು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದಿನೇಶ್ ಕಾಮತ್ ಅವರಿಗೆ ಬೆಡ್ ಶೀಟ್ ಹಸ್ತಾಂತರಿಸಿ ಮಾತನಾಡಿ, ಡಾ.ಹೆಗ್ಗಡೆಯವರ ಜನ್ಮದಿನದ ಸಂದರ್ಭದಲ್ಲಿ ಆಯೋಜಿಸಿರುವ ಸೇವಾ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಇಂತಹ ಸೇವಾ ಚಟುವಟಿಕೆಗಳು ಜನರಿಗೆ ಹೆಚ್ಚಿನ ಪ್ರಯೋಜನ ನೀಡುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ದಿನೇಶ್ ಅವರು ಯೋಜನೆಯ ಕ್ಷೇತ್ರಮಟ್ಟದ ಕಾರ್ಯಚಟುವಟಿಕೆಗಳು, ವಿವಿಧ ಯೋಜನಾ ಕಾರ್ಯಕ್ರಮಗಳು ಹಾಗೂಸಮುದಾಯದ ಅಭಿವೃದ್ಧಿಗಾಗಿ ಕೈಗೊಳ್ಳಲಾಗುತ್ತಿರುವ ಸೇವಾ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದಿನೇಶ್ ಕಾಮತ್ ಮಾತನಾಡಿ, ಆಸ್ಪತ್ರೆಯಲ್ಲಿ ಇಂತಹ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪುಣ್ಯದ ಕೆಲಸವಾಗಿದೆ. ಒಳರೋಗಿಗಳಿಗೆ ಅನುಕೂಲವಾಗುವ ದೆಸೆಯಲ್ಲಿ ಬೆಡ್ಶೀಟ್ಗಳ ವಿತರಣೆಯುಂತ ಮಾನವೀಯ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ನಾವೂರು, ವೈದ್ಯ ಡಾ. ಕಿಶೋರ್, ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ಎಂಐಎಸ್ ಯೋಜನಾಧಿಕಾರಿ ಪ್ರೇಮನಾಥ್, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ, ಜಿಲ್ಲಾ ಮತ್ತು ಯೋಜನಾ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.
