ಬಂಟ್ವಾಳ :  ಅಯುಷ್ಮಾನ್ ಮತ್ತು ಯಶಸ್ವಿನಿ ವಿಮಾ ಯೋಜನೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ಹಿರಿಯ ನಾಗರಿಕರಿಗೆ ಸ್ಪೆಷಲ್ ವಾರ್ಡ್ ಸೌಲಭ್ಯ ಒದಗಿಸಬೇಕು,ಬಿ.ಪಿ.ಎಲ್ ಮಾತ್ರವಲ್ಲ ಎಲ್ಲಾ ಹಿರಿಯ ನಾಗರಿಕರಿಗೆ ಈ ಸೌಲಭ್ಯವನ್ನು ವಿಸ್ತರಿಸುವಂತೆ ಕ್ರಮಕೈಗೊಂಡು ಸರಕಾರದಿಂದ ಆದೇಶಿಸುವಂತೆ ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ)ದಿಂದ ರಾಜ್ಯ ಅರೋಗ್ಯಸಚಿವರಾದ ಯು.ಟಿ.ಖಾದರ್ ಅವರಿಗೆ ಸಚಿವರಿಗೆ ಮನವಿ  ಸಲ್ಲಿಸಲಾಯಿತು


ಹಿರಿಯ ನಾಗರಿಕರು ಸಾಮಾನ್ಯ ವಾರ್ಡುಗಳಲ್ಲಿ ದಾಖಲಾದರೆ ಶೌಚಾಲಯ ಹಾಗೂ ಇತರ ವೈಯಕ್ತಿಕ ಕೆಲಸಗಳಿಗೆ ವಯೋವೃದ್ಧರಿಗೆ ಓಡಾಡಲು ಕಷ್ಟವಾಗುತ್ತದೆ .ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ವಿವರಿಸಲಾಗಿದೆ.
ಈ ಸಂದರ್ಭ ಸಂಘದ ಅಧ್ಯಕ್ಷರಾದ ಸೋಮಯ್ಯ ಹನೈನಡೆ, ಗೌರವಾಧ್ಯಕ್ಷ ಶೇಷಪ್ಪ ಮಾಸ್ಟರ್, ಕಾರ್ಯದರ್ಶಿ ಶ್ರೀನಿವಾಸ್ ಖಂಡಿಗ, ಸದಸ್ಯರಾದ ಶೀನ ಮೂಲ್ಯ ಅಲ್ಲಿಪಾದೆ, ಲೋಕನಾಥ ದೇವಂದಬೆಟ್ಟು , ಬೂಡ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಮೊದಲಾದವರಿದ್ದರು.

By Suddi9