ಗುರುಪುರ : ಗುರುಪುರ ಗೋಳಿದಡಿಗುತ್ತಿನ ಮನೆಗೆ ಅನತಿ ದೂರದಲ್ಲಿ ಫಲ್ಗುಣಿ ನದಿ ತಟದಲ್ಲಿ ಸಮತಟ್ಟುಗೊಳಿಸಲಾದ ವಿಶಾಲ ಪ್ರದೇಶದಲ್ಲಿ ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಕೆ ಎಸ್ ನಿತ್ಯಾನಂದ ಮುಂದಾಳತ್ವದಲ್ಲಿ ಶ್ರೀ ಮಹಾಕಾಲೇಶ್ವರ ಬಯಲು ಆಲಯಕ್ಕೆ `ತುಲಾಧಾರ ಪ್ರತಿಷ್ಠೆ’ ನಡೆಯಿತು.19-3
ಶ್ರೀ ಮಹಾಕಾಲೇಶ್ವರ ವಿಶೇಷ :
ಇಲ್ಲಿ ಮುಂದಿನ ವರ್ಷ ನಿರ್ಮಾಣಗೊಳ್ಳಲಿರುವ ಶ್ರೀ ಮಹಾಕಾಲೇಶ್ವರ ಬಯಲು ಆಲಯದಲ್ಲಿ ಹದಿನೆಂಟುವರೆ ಅಡಿ ಎತ್ತರದ ಕೃಷ್ಣಶಿಲೆಯ 10 ಭುಜಗಳ ಶ್ರೀ ಮಹಾಕಾಲೇಶ್ವರ ಭವ್ಯ ವಿಗ್ರಹ ಸ್ಥಾಪನೆಯಾಗಲಿದೆ. ಅನಾದಿ ಕಾಲದಲ್ಲಿ ನದಿ ತಟದಲ್ಲಿ ಮಹಾಕಾಲ ಸನ್ಯಾಸಿ ಸ್ಥಾಪಿಸಿದ ವಜ್ರಗಾರ ಲೇಪಿತ ಹದಿನೆಂಟುವರೆ ಅಡಿ ಎತ್ತರದ ಶಿವನ ಮಣ್ಣಿನ ಲಿಂಗವಿತ್ತು ಮತ್ತು ಅದು ಕಾಲಾನಂತರ ಅವನತಿ ಹೊಂದಿದೆ. ಇಲ್ಲೇ ಹತ್ತಿರದಲ್ಲಿ ಸಿಹಿ ನೀರಿನ ಕೆರೆಯೊಂದು ಇತ್ತು. ಆ ಕೆರೆಗೆ ಸಂವಾದಿಯಾಗಿ ಬಯಲು ಆಲಯದ ಪಕ್ಕದಲ್ಲಿ ಈಗಾಗಲೇ ಶ್ರೀ ಉಜ್ಜೈನಿ ತೀರ್ಥಕೆರೆ ನಿರ್ಮಿಸಲಾಗಿದೆ. ಈ ಆಲಯದಲ್ಲಿ ವಿಗ್ರಹದ ತುತ್ತ ತುದಿಗೆ ಹೋಗಿ ಶಿವಮೂರ್ತಿಗೆ ಭಕ್ತಾದಿಗಳು ಅಭಿಷೇಕ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಮತ್ತು ಇಲ್ಲಿ ಭಕ್ತನೇ ಅರ್ಚಕ. ಇದು ಬ್ರಹ್ಮಶ್ರೀ ನಿತ್ಯಾನಂದರ ಮಾಗದರ್ಶನದಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಗೋಳಿದಡಿಗುತ್ತಿನ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಹೇಳಿದರು.19-16

ಎರಡು ದಿನಗಳ `ಪರ್ಬೊದ ಸಿರಿ’ ವಾರ್ಷಿಕ ಜಾತ್ರೆಯಲ್ಲಿ ಅಳವಡಿಸಲಾಗಿದ್ದ ಗ್ರಾಮೀಣ ಪರಿಕಲ್ಪನೆಯ ಮಾರಾಟ ಮತ್ತು ಪ್ರದರ್ಶನ ಸ್ಟಾಲುಗಳ `ಸಂತೆ’ಯು ಎಲ್ಲರ ಆಕರ್ಷಣೆ ಕೇಂದ್ರವಾಗಿತ್ತು19-17

ಕೃಷಿಕರಿಗೆ ಬೇಕಾದ ಏಣಿ :
ಸಂತೆಯಲ್ಲಿ ಮುಖ್ಯವಾಗಿ ಸುಳ್ಯದ ಎಸ್‍ಆರ್‍ಕೆ ಲ್ಯಾಡರ್(ಏಣಿಗಳು) ಸಂಸ್ಥೆಯ ಏಣಿಗಳ ಸ್ಟಾಲು ಕೃಷಿಕರೊಂದಿಗೆ ಇತರರ ಆಸಕ್ತಿ ಕೇಂದ್ರವಾಗಿತ್ತು. ತೆಂಗು, ಕಂಗಿಗೆ ಹಾಗೂ ಕರಿಮೆಣಸು ಕೊಯ್ಯಲು ಸುಲಭವಾಗಿ ಏರಬಹುದಾದ ಏಣಿಗಳು ಇಲ್ಲಿ ಕೈಗೆಟಕುವ ಬೆಲೆಯಲ್ಲಿ ಲಭ್ಯವಿತ್ತು. ಐದರಿಂದ 30 ಅಡಿ ಎತ್ತರ ಸಿಂಗಲ್ ಏಣಿಗಳು ಮತ್ತು 20*20*10(50 ಅಡಿ) ಅಡಿ ಎತ್ತರಕ್ಕೆ ಏರಬಹುದಾದ ಏಣಿಗಳಿದ್ದವು. ಇವು ತೋಟಗಾರಿಕೆಯಲ್ಲದೆ ಇತರ ಕೆಲಸಗಳಿಗೂ ಬಳಸಿಕೊಳ್ಳಲು ಯೋಗ್ಯವಾಗಿವೆ. ದಕ್ಷಿಣ ಕನ್ನಡದಲ್ಲಿ ಈ ಏಣಿಗಳಿಗೆ ಸಾಕಷ್ಟು ಬೇಡಿಕೆ ಇದೆ ಎಂದು ಸ್ಟಾಲಿನ ಪ್ರತಿನಿಧಿಗಳು ತಿಳಿಸಿದರು.19-15

19-14
ಕಸದಿಂದ ರಸ
`ಕ್ರಾಫ್ಟ್ ವ್ಯಕ್ತಿ’ :
ಮಂಗಳೂರು ಹಾಗೂ ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಶಾಲೆಗಳಲ್ಲಿ ಈಗಾಗಲೇ ಹಲವು ಪ್ರಾತ್ಯಕ್ಷಿಕೆ ನೀಡಿರುವ ಕೇರಳ ಮೂಲದ ಮೋಸೆಸ್ ಶರವಣನ್ ಸಂತೆಯಲ್ಲಿ ಎಲ್ಲರಿಗೂ ಕುತೂಹಲದ ವ್ಯಕ್ತಿಯಾಗಿದ್ದರು. ವಿಕಲ ಚೇತನರಾಗಿರುವ ಇವರು `ಕಸದಿಂದ ರಸ’ ಎಂಬಂತೆ ತ್ಯಾಜ್ಯ ಕಾಗದ, ಪ್ಲಾಸ್ಟಿಕ್, ತಂತಿ, ಬಟ್ಟೆಬರೆ….ಹೀಗೆ ಕೈಗೆ ಸಿಕ್ಕ ಯಾವುದೇ ಸೊತ್ತುಗಳಿಗೆ ಆಕರ್ಷಕ ರೂಪು ನೀಡುವ ಜಾಣ್ಮೆ ಹೊಂದಿದ್ದಾರೆ. ಕತ್ತರಿಯಿಂದ `ಕಚಕ್’ ಎಂದು ಕತ್ತರಿಸಿದರೆ ಅಲ್ಲೊಂದು ವೈವಿಧ್ಯಮಯ ಕಲಾಕೃತಿ ಮೂಡುತ್ತಿತ್ತು. ಇವರು ಗುರುಪುರ ಕೈಕಂಬದ ಕಿನ್ನಿಕಂಬಳ, ಮಂಗಳೂರಿನ ಕಾಪಿಕಾಡು-ಬಿಜೈ, ದೇರೆಬೈಲು ಹಾಗೂ ಇತರ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಸದಿಂದ ರಸ ತೆಗೆಯುವ ಕ್ರಾಫ್ಟುಗಳ ತರಬೇತಿ ನೀಡಿದ್ದಾರೆ. ರಸ್ತೆ ಬದಿಯಲ್ಲಿ ಕುಳಿತು ಕ್ಷಿಪ್ರಗತಿಯಲ್ಲಿ ಬಹುಬಗೆಯ ವಿನ್ಯಾಸದ ಕ್ರಾಫ್ಟು ತಯಾರಿಸುವುದರೊಂದಿಗೆ ಆಸಕ್ತರಿಗೆ ತನ್ನ ಕಲೆ ಧಾರೆಯೆರೆಯುತ್ತಾರೆ.gur-jan-20-craft-2
ಸಂತೆಯ ಸೊಬಗು:
ಸಂತೆಯಲ್ಲಿ ಬಡಗಿಯೊಬ್ಬರು ಹಳೆ ಕಾಲದ `ಸಿದಿ’ ಬಳಸಿಕೊಂಡು ಕತ್ತಿ ಹಾಗೂ ಇತರ ಹರಿತವಾದ ಗೃಹೋಪಯೋಗಿ ಸೊತ್ತು ತಯಾರಿಸುತ್ತಿದ್ದರೆ, ಪಕ್ಕದಲ್ಲೇ ಮಕ್ಕಳಿಗೆ ಪ್ರಿಯವಾದ ತೊಟ್ಟಿಲು ಸುತ್ತುತ್ತಿತ್ತು. ಪುಸ್ತಕ ಮಳಿಗೆ, ಹಳ್ಳಿ ಉಪ್ಪಿನಕಾಯಿ, ಮಳಲಿಯ ಮಡಕೆಗಳು, ಬಟ್ಟೆಬರೆ, ತರಕಾರಿ ಬೀಜಗಳು, ಯಂತ್ರೋಪಕರಣಗಳು, ಗೃಹೋಪಯೋಗಿ ಸೊತ್ತುಗಳ ಪ್ರದರ್ಶನ-ಮಾರಾಟ ಆಕರ್ಷಣೆ ಕೇಂದ್ರವಾಗಿತ್ತು.

gur-jan-20-katthi-sidi
ಶಕ್ತಿಕಲ್ಲು ಎತ್ತುವ ಸ್ಪರ್ಧೆ :
ಮತ್ತೊಂದೆಡೆ ಶಕ್ತಿಕಲ್ಲು ಎತ್ತುವ ಪ್ರದರ್ಶನ ನಡೆಯುತ್ತಿತ್ತು. ವಿಜೇತರಿಗೆ ಬಹುಮಾನವಿತ್ತು. ಇದರಲ್ಲಿ 10ರಿಂದ 100, 150 ಕಿಲೋವರೆಗಿನ ಗುಂಡು ಕಲ್ಲುಗಳು ಇದ್ದವು. ಪರ್ಬಕ್ಕೆ ಬಂದ ಪ್ರತಿಯೊಬ್ಬರಿಗೂ ಕಲ್ಲಂಗಡಿ ಹಾಗೂ ಕಬ್ಬಿನ ಪಾನೀಯ, ಫಲಾಹಾರ, ಊಟೋಪಚಾರ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರಿಗೆ ಡಜನ್ ಬಳೆ ವಿತರಿಸಲಾಗಿದೆ. ಕೆಲವು ಮನಮುಟ್ಟುವ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಒಟ್ಟಾಗಿ ಗೋಳಿದಡಿಗುತ್ತಿನ ಪರ್ಬೊದ ಸಿರಿಯು ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಮುಂದುವರಿಯಿತು.0031

By suddi9

Leave a Reply

Your email address will not be published. Required fields are marked *