ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಬಹುತೇಕ ಕಾಮಗಾರಿ ಪೂರ್ತಿಗೊಂಡಿದೆ. ದೇವಸ್ಥಾನದ ಕಾಮಗಾರಿಗಾಗಿ ಮರಳಿನ ಅಗತ್ಯತೆಗೆ ಸ್ಪಂದಿಸಿದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಚಂದ್ರಹಾಸ್ ಪಲ್ಲಿಪಾಡಿ, ಪ್ರಸಾದ್ ಗರೋಡಿ, ಎ.ಕೆ. ಅಶ್ರಫ್, ಆಸಿಂ ಗರೋಡಿ ಸೇರಿ ಸ್ಥಳೀಯ ಲಾರಿ ಮಾಲಕರು ಸುಮಾರು 30 ಲೋಡಿನಷ್ಟು ಮರಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಮುಂಚೆಯೂ ಸಾಕಷ್ಟು ಲೋಡು ಮರಳನ್ನು ದೇಣಿಗೆಯಾಗಿ ನೀಡಿದ್ದರು. 



