ಕಡೇಶ್ವಾಲ್ಯ ಕ್ಷೇತ್ರದಲ್ಲಿ ನ.8 ರಂದು ದೊಡ್ಡರಂಗಪೂಜೆ
ಬಂಟ್ವಾಳ:ತಾಲೂಕಿನ ಕಡೇಶಿವಾಲಯ ಮಹತೋಭಾರ ಚಿಂತಾಮಣಿ ಶ್ರೀ ಲಕ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ನ.8 ರಂದು ರಾತ್ರಿ 7 ಗಂಟೆಗೆ ಬ್ರಹ್ಮ ಶ್ರೀ ಉಚ್ಚಿಲಂತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಸಾರ್ವಜನಿಕ ದೊಡ್ಡರಂಗಪೂಜೆ ಹಾಗೂ ದೇವರ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಈಶ್ವರ ಪೂಜಾರಿ ಅವರು ತಿಳಿಸಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈಬಗ್ಗೆ ಮಾಹಿತಿ ನೀಡಿದ ಅವರು,ಶನಿವಾರ ಬೆಳಿಗ್ಗೆಯಿಂದ ವಿವಿಧ ವೈಧಿಕ ವಿಧಿ ವಿಧಾನಗಳು,ಅಭಿಷೇಕ,ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ,ರಾತ್ರು ದೊಡ್ಡರಂಗಪೂಜೆ,ದೇವರ ಬಲಿ ಉತ್ಸವ,ಅಷ್ಠವಧಾನ ಸೇವೆ,ಶಾಸ್ತ್ರೀಯ ಸಂಗೀತ,ಭರತನಾಟ್ಯ,ಯಕ್ಚಗಾನ,ಭಜನೆ ನಡೆಯಲಿದೆ.
ಭಾನುವಾರ ಬೆಳಿಗ್ಗೆ ಕಲಶ ಹೋಮ,ಕಲಾಶಾಭಿಷೇಕ,ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಮುಂದಿನ ಎಪ್ರಿಲ್ ತಿಂಗಳಲ್ಲಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಸಲು ಸಂಕಲ್ಪ ಮಾಡಲಾಗಿದ್ದು, ನಡುಮೊಗರುಗುತ್ತು ಕುಸುಮಾಧರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಜೀಣೋದ್ದಾರದ ಪ್ರಯುಕ್ತ ಇರಿಸಲಾದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ದೋಷಗಳ ಪರಿಹಾರರ್ಥವಾಗಿ ದೊಡ್ಡರಂಗಪೂಜೆ ನಡೆಸಲಾಗುತ್ತಿದೆ.ಸುಮಾರು 5000 ಮಂದಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಕೂಸಪ್ಪ ಪೂಜಾರಿ, ಮತ್ತು ನವೀನ್ ಶೆಟ್ಟಿ ಅವರು ಉಪಸ್ಥಿತರಿದ್ದರು.



