ಕುಡ್ಲ ಕುಲಾಲೆರ್ ಚಾರಿಟೇಬಲ್ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷರಾಗಿಸದಾಶಿವ ಬಂಗೇರ ಆಯ್ಕೆ
ಬಂಟ್ವಾಳ: ಕುಡ್ಲ ಕುಲಾಲೆರ್ ಚಾರಿಟೇಬಲ್ ಸೇವಾ ಟ್ರಸ್ಟ್ ಮಂಗಳೂರು (ರಿ) ದ.ಕ ನೂತನ ಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು,ಬಂಟ್ವಾಳ ನಗರಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಬಂಟ್ವಾಳ ಅವರು ಸ್ಥಾಪಕಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮೆಸ್ಕಾಂನ ನಿವೃತ್ತ ಎಂ.ಡಿ.ಮಂಜಪ್ಪ ಬಿಜೈ, ಮಮನಪಾ ಮಾಜಿ ಉಪಮೇಯರ್ ರಾಜೇದ್ರ ಕುಮಾರ್ (ಉಪಾಧ್ಯಕ್ಷರು),ನಿವೃತ್ತ ಮುಖ್ಯೋಪಾಧ್ಯಾಯ ಟಿ.ಸೇಸಪ್ಪ ಮೂಲ್ಯ(ಪ್ರದಾನ ಕಾರ್ಯದರ್ಶಿ),
ನಿವೃತ್ತ ಇನ್ಕಮ್ ಟ್ಯಾಕ್ಸ್ ಅಧಿಕಾರಿ ವಿಶ್ವನಾಥ ಕುದಾಯಿ(ಕೋಶಾಧಿಕಾರಿ)ಆಯ್ಕೆಗೊಂಡಿದ್ದಾರೆ.
ಉಳಿದಂತೆ ಟ್ರಸ್ಟಿಗಳಾಗಿ ಪೃಥ್ವಿರಾಜ್ ಆರ್ ಕೆ ಎಡಪದವು, ಸೋಮಯ್ಯ ಹನೈನಡೆ ಬೆಳ್ತಂಗಡಿ,ಸುಂದರ ಬಂಗೇರ ಆದ್ಯಪಾಡಿ,ಗಿರೀಶ್ ಎಂ.ಪಿ ಕುತ್ತಾರ್ ಮಂಗಳೂರು,ಚಂದ್ರಹಾಸ ಪಲ್ಲಿಪಾಡಿ,ಭಾಸ್ಕರ ಎಂ ಪೆರುವಾಯಿ ಪುತ್ತೂರು,ದೇವಪ್ಪ ಕುಲಾಲ್ ಪಂಜಿಕಲ್ಲು,ರಮೇಶ್ ಬಾಳೆಹಿತ್ಲು ಬೆಂಗಳೂರು,ಉಮೇಶ್ ಕೆ. ಬೆಂಗಳೂರು,ದಯಾನಂದ ಬಂಟ್ವಾಳ್ ,ಬಾಸ್ಕರ್ ಅಜೆಕಳ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಟ್ರಸ್ಟ್ ನ ಮೊದಲ ಸಭೆ ಮಂಗಳೂರಿನ ಹೊಟೇಲ್ ವುಡ್ ಲ್ಯಾಂಡ್ ನಡೆದಿದ್ದು,ಕುಲಾಲ ಯುವಕ- ಯುವತಿಯರಿಗೆ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುವ ನಿಟ್ಡಿನಲ್ಲಿ ವಿವಿಧ ತರಬೇತಿ,ಉನ್ನತ ಮಟ್ಟದಉದ್ಯೋಗಕ್ಕಾಗಿ ಮಾರ್ಗದರ್ಶನ ನೀಡುವುದು ಸಹಿತ ಸಮಾಜದ ಏಳಿಗೆಗಾಗಿ ಉಪಯೋಗವಾಗುವಂತೆ ಚಟುವಟಿಕೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.



