ಎಂ ಆರ್ ಪಿ ಎಲ್ ನ ಸಿಎಸ್ ಆರ್ ನಿಧಿ 10 ಲಕ್ಷ ರೂ.ವೆಚ್ಚದಲ್ಲಿ 12 ಶೌಚಾಲಯಗಳ ಸಮುಚ್ಛಯಕ್ಕೆ ಶಿಲಾನ್ಯಾಸ
ಬಂಟ್ವಾಳ : ತಾಲೂಕಿನ ತುಂಬೆ ಗ್ರಾಮದ ದ ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ಎಂ ಆರ್ ಪಿ ಎಲ್ ನ ಸಿಎಸ್ ಆರ್ ನಿಧಿ 10 ಲಕ್ಷ ರೂ.ವೆಚ್ಚದಲ್ಲಿ 12 ಶೌಚಾಲಯಗಳ ಸಮುಚ್ಛಯಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಲಾಯಿತು.
ತುಂಬೆ ದ ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ಕಳೆದ ಹಲವು ಸಮಯದಿಂದ ಶೌಚಾಲಯದ ಬೇಡಿಕೆಯ ಹಿನ್ನಲೆಯಲ್ಲಿ, ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟರವರ ಶಿಫಾರಸಿನ ಮೇರೆಗೆ ಎಂ ಆರ್ ಪಿ ಎಲ್ ಸಂಸ್ಥೆ ಸಿಎಸ್ ಆರ್ ನಿಧಿ 10 ಲಕ್ಷ ರೂ.ಅನುದಾನ ಮಂಜೂರು ಮಾಡಿದೆ.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಂದೀಪ್ ಕುಲಾಲ್ ರವರು ಶಿಲಾನ್ಯಾಸ ನೆರವೇರಿಸಿದರು , ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ , ಉಪಾಧ್ಯಕ್ಷ ಗಣೇಶ್ ಸಾಲ್ಯಾನ್ ,ಸದಸ್ಯ ಪ್ರವೀಣ್ ಬಿ.ತುಂಬೆ, ಬಿಜೆಪಿಮಂಗಳೂರು ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್ , ಪ್ರದಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು , ಮಾಜಿ ತಾ.ಪಂ.ಸದಸ್ಯ ಗಣೇಶ್ ಸುವರ್ಣ ತುಂಬೆ , ಬಿಜೆಪಿ ಮಂಗಳೂರು ಮಂಡಲದ ಉಪಾಧ್ಯಕ್ಷರಾದ ಮನೋಜ್ ಆಚಾರ್ಯ ನಾಣ್ಯ , ಪುದು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ತೇವು, ಕಾರ್ಯದರ್ಶಿ ರೂಪೇಶ್ ಜ್ಯೋತಿಗುಡ್ಡೆ , ಬಿಜೆಪಿ ಮುಖಂಡರುಗಳಾದ ಜಯಶ್ರೀ ಕರ್ಕೇರ,ದಿನೇಶ್ ಶೆಟ್ಟಿ ಕೊಟ್ಟಿಂಜ, ಜಲಜಾಕ್ಷಿ ಕೋಟ್ಯಾನ್ ,ಪಂಚಾಯತ್ ಸದಸ್ಯರುಗಳಾದ ಅರುಣ್ ಗಾಣದಲಚ್ಚಿಲ್ , ಇಬ್ರಾಹಿಂ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶಕುಂತಲಾ ಹರೀಶ್ ಕೊಟ್ಟಿಂಜ ಉಪಸ್ಥಿತರಿದ್ದರು, ಶಾಲಾ ಮುಖ್ಯ ಶಿಕ್ಷಕಿ ಶಕುಂತಲಾ ಎಸ್ ಉಳ್ಳಾಲ್ ರವರು ಸ್ವಾಗತಿಸಿ,ವಂದಿಸಿದರು



