ಸೆ. 21 ಕ್ಕೆ ತಾಲೂಕು ಬಿಲ್ಲವ ಸಂಘದಿಂದ ಮಂಗಳಾ ಕ್ರೀಡಾಂಗಣದಲ್ಲಿ ಮಂಗಳೂರು ದಸರಾ ಕ್ರೀಡೋತ್ಸವ
ಮಂಗಳೂರು : ಮಂಗಳೂರು ತಾಲೂಕು ಬಿಲ್ಲವ ಸಂಘ(ರಿ) ಇದರ ವತಿಯಿಂದ ಸೆ. 21 ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸರ್ವ ಧರ್ಮಗಳ ಕ್ರೀಡಾ ಸಂಗಮ `ಮಂಗಳೂರು ದಸರಾ ಕ್ರಿಡೋತ್ಸವ’ದ ಆಮಂತ್ರಣ ಪತ್ರಿಕೆಯನ್ನು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ ಅವರು ಸೆ. 5 ರಂದು ಬಿಡುಗಡೆಗೊಳಿಸಿದರು.

ಕುದ್ರೋಳಿ ದೇವಸ್ಥಾನದ ಸಭಾಗೃಹದಲ್ಲಿ ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ್ರ ಜೆ. ಸುವರ್ಣ, ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿ ಉಪಾಧ್ಯಕ್ಷೆ ಊರ್ಮಿಳಾ ಆರ್, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ, ಕುದ್ರೋಳಿ ಕ್ಷೇತ್ರದ ಆಡಳಿತ ಮಂಡಳಿ ಸದಸ್ಯ ಕೃತೀನ್ ಅಮೀನ್, ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಪೂಜಾರಿ ಕುಳಾಯಿ, ಉಪಾಧ್ಯಕ್ಷರಾದ ಸುರೇಶ್ ಚಂದರ್ ಕೋಟ್ಯಾನ್, ವೆಂಕಟೇಶ್ ದಾಸ್, ಸಲಹೆಗಾರರಾದ ರಾಮಚಂದ್ರ ಸಾಲ್ಯಾನ್, ಚರಣ್ ಕೆ, ತುಕಾರಾಮ್, ತ್ರೋಬಾಲ್ ಕ್ರೀಡಾ ಸಂಚಾಲಕಿ ರವಿಕಲಾ, ಮಾಜಿ ಮೇಯರ್ ವಿಜಯಾ ಎ, ಗೌರವಿ, ಯೋಗೀಶ್, ಸುಬೋಧ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಮಂಗಳಾ ಕ್ರೀಡಾಂಗಣದಲ್ಲಿ ಸೆ. 21ರಂದು ಬೆಳಿಗ್ಗೆ 9.30 ಕ್ಕೆ ಆಯೋಜಿಸಲಾದ ಕ್ರೀಡೋತ್ಸವಕ್ಕೆ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ದೀಪ ಬೆಳಗಿಸಿದರೆ, ಸ್ಪೀಕರ್ ಯು. ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಧ್ವಜಾರೋಹಣ ಮಾಡಿದರೆ, ಸಂಸದ ಕ್ಯಾ. ಬ್ರಿಜೇಶ್ ಚೌಟ ಕ್ರೀಡಾಜ್ಯೋತಿ ಬೆಳಗಿಸಲಿದ್ದಾರೆ. ಸಂಘದ ಅಧ್ಯಕ್ಷ ಜಿತೇಂದ್ರ ಜೆ. ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಶಾಸಕರ ಸಹಿತ ಗಣ್ಯಾತಿಗಣ್ಯರು ಉಪಸ್ಥಿತಲಿರುವರು.



