ತುಳುವರ ಪ್ರಾಚೀನ ಬದುಕು ಮತ್ತು ಪರಂಪರೆಯನ್ನು ಇಂದಿನ ಪೀಳಿಗೆಗೆ ತಿಳಿಸಬೇಕಾದ ಅನಿವಾರ್ಯತೆಯಿದೆ:ಲೋಕೇಶ್ ಕೋಟ್ಯಾನ್ ಕೂಳೂರು
ಮಂಗಳೂರು: ತುಳುವರ ಪ್ರಾಚೀನ ಬದುಕು ಮತ್ತು ಪರಂಪರೆಯನ್ನು ಇಂದಿನ ಪೀಳಿಗೆಗೆ ತಿಳಿಸಬೇಕಾದ ಅನಿವಾರ್ಯತೆಯಿದೆ. ಅದಕ್ಕಾಗಿ ಆಟಿಡೊಂಜಿ ದಿನದಂತಹ ಕಾರ್ಯಕ್ರಮಗಳು ಎಲ್ಲಡೆ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಇಂದಿನ ದಿನಗಳಲ್ಲಿ ನಡೆಯುತ್ತಿರುವ ಯುವ ಸಮುದಾಯದ ಪ್ರಯತ್ನ ಶ್ಲಾಘನೀಯ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು ಹೇಳಿದರು.

ಯುವವಾಹಿನಿ ಪೆರ್ಮಂಕಿ ಘಟಕ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಉಳಾಯಿಬೆಟ್ಟು, ಮಲ್ಲೂರು, ಬೊಂಡಂತಿಲ ಗ್ರಾಮದ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪೆರ್ಮಂಕಿ ವಿಶಾಲ್ ಗಾರ್ಡನ್ನಲ್ಲಿ ಭಾನುವಾರ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಚೆನ್ನಮಣೆ ಆಟ ಆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಯುವವಾಹಿನಿ ಪೆರ್ಮಂಕಿ ಘಟಕ ಅಧ್ಯಕ್ಷ ದಿನೇಶ್ ಕುಮಾರ್ ಬಜಿಲೊಟ್ಟು ಅಧ್ಯಕ್ಷತೆ ವಹಿಸಿದ್ದರು. ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಪ್ರಮೀಳಾ ದೀಪಕ್ ಪೆರ್ಮುದೆ ಅವರು ತುಳುನಾಡಿನ ಜಾನಪದ ಬದುಕು ಆಟಿ ತಿಂಗಳ ಬಗ್ಗೆ ಉಪನ್ಯಾಸ ನೀಡಿದರು. ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ, ನೀರುಮಾರ್ಗ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಪೂಜಾರು ಚಿಕ್ಕಬೆಟ್ಟು, ಎಸ್ಆರ್ಆರ್ ಮಸಾಲಾ ಮಾಲಕ ಶೈಲೇಂದ್ರ ವೈ.ಸುವರ್ಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಜ್ಪೆ ತಾಲೂಕು ಯೋಜನಾಽಕಾರಿ ಗಿರೀಶ್ ಕುಮಾರ್ ಎಂ., ಯುವವಾಹಿನಿ ಕೇಂದ್ರ ಸಮಿತಿ ನಿಕಟಪೂರ್ವ ಅಧ್ಯಕ್ಷ ಹರೀಶ್ ಕೆ. ಪೂಜಾರಿ, ಗುರುಪುರ ಕೆನರಾ ಬ್ಯಾಂಕ್ ಮ್ಯಾನೇಜರ್ ಲೋಕನಾಥ್ ಗೌಡ, ಆಸ್ಕರ್ ಕ್ಲಬ್ ಮಾಲಕ ಸುಽರ್ ಪಕ್ಕಳ ಪೆರ್ಮಂಕಿಗುತ್ತು, ಯೋಜನೆಯ ನೀರುಮಾರ್ಗ ವಲಯಾಧ್ಯಕ್ಷ ಭಾಸ್ಕರ್ ಸುವರ್ಣ, ಗುರುಪುರ ವಲಯಾಧ್ಯಕ್ಷ ಉಮೇಶ್ ಆಚಾರ್ಯ, ಯೆನೆಪೋಯ ಬ್ಲಡ್ಬ್ಯಾಂಕ್ ಸಿಬ್ಬಂದಿ ನಿಶ್ಮಿತಾ ಉಪಸ್ಥಿತರಿದ್ದರು.
ದೇರಳಕಟ್ಟೆ ಯೆನೆಪೋಯ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ರಕ್ತದಾನ ಶಿಬಿರ, ಜಿ.ಆರ್. ಮೆಡಿಕಲ್ ಕಾಲೇಜು ನೀರುಮಾರ್ಗ ಇದರ ಸಹಯೋಗದಲ್ಲಿ ಉಚಿತ ಹೃದಯ ತಪಾಸಣೆ, ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ತುಳುನಾಡಿನ ಸಾಂಪ್ರದಾಯಿಕ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಸ್ಪರ್ಧೆ ಏರ್ಪಡಿಸಲಾಗಿತ್ತು.
ದಿನೇಶ್ ತಲ್ಲಿಮಾರ್ ಸ್ವಾಗತಿಸಿದರು. ಶಶಿಕುಮಾರ್ ವಂದಿಸಿದರು. ಕೀರ್ತಿರಾಜ್ ಕರಂದಾಡಿ ಕಾರ್ಯಕ್ರಮ ನಿರೂಪಿಸಿದರು.



