ಶಕ್ತಿನಗರ ಸರಕಾರಿ ಪಿಯು ಕಾಲೇಜಲ್ಲಿ ಆಟಿಡೊಂಜಿ ದಿನ
ಮಂಗಳೂರು : ಶಕ್ತಿನಗರ ನಾಲ್ಯಪದವಿನ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಭವನದಲ್ಲಿ ಜು. ೨೧ರಂದು ಕಾಲೇಜಿನ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ `ಆಟಿಡೊಂಜಿ ದಿನ'(ಆಷಾಢದಲ್ಲಿ ಒಂದು ದಿನ) ಕಾರ್ಯಕ್ರಮ ನಡೆಯಿತು.

ಚೇಳ್ಯಾರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶಪಾಲೆ ಡಾ. ಜ್ಯೋತಿ ಚೇಳ್ಯಾರು ಅವರು ತೆಂಗಿ ಸಿರಿ ಅರಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಜಯಾನಂದ ಸುವರ್ಣ ಅವರು ಮಾತನಾಡಿ, ಆಟಿ ತಿಂಗಳ ಆಚರಣೆ ಕೇವಲ ಪ್ರದರ್ಶನವಾಗಿರದೆ ವಿದ್ಯಾರ್ಥಿಗಳ ಜೀವನಕ್ಕೆ ನಿದರ್ಶನವಾಗಬೇಕು ಎಂದರು.

ಪ್ರೌಢಶಾಲಾ ಮುಖ್ಯ ಶಿಕ್ಷಕ ಡಾ. ಪ್ರಶಾಂತ್, ಪ್ರಗತಿಪರ ಕೃಷಿಕ ವಿಜಯ ಶೆಣೈ, ಹಿರಿಯ ಉಪನ್ಯಾಸಕಿ ಸರೋಜಾದೇವಿ, ಕಾರ್ಯಕ್ರಮ ಸಂಯೋಜಕಿ ಸುಜಾತಾ ಬೇಕಲ್ ಉಪಸ್ಥಿತರಿದ್ದರು.
ಕಾಲೇಜು ಉಪನ್ಯಾಸಕ ಕೇಶವ ಪೂಜಾರಿ ಅವರು ಪ್ರಸ್ತಾವಿಕ ಮಾತನ್ನಾಡಿದರು. ಪ್ರಥಮ ಪಿಯು ವಿದ್ಯಾರ್ಥಿ ತರುಣ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ದೀಕ್ಷಾ ಮತ್ತು ಸಿಂಚನಾ ನಿರೂಪಿಸಿದರು. ದ್ವಿತೀಯ ಪಿಯು ವಿದ್ಯಾರ್ಥಿ ಗೌತಮ್ ವಂದಿಸಿದರು.
ವಿದ್ಯಾರ್ಥಿಗಳಿAದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಸಿದ್ಧಪಡಿಸಿದ ಒಟ್ಟು ೨೬ ವಿವಿಧ ಬಗೆಯ ಆಟಿ ತಿಂಗಳ ವಿಶೇಷ ತಿಂಡಿ-ತಿನಸು, ಖಾದ್ಯದೊಂದಿಗೆ ಸಹಭೋಜನ ನಡೆಯಿತು.



