ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ವಲಯಮಟ್ಟದ ಒಕ್ಕೂಟಗಳ ಪದಗ್ರಹಣ ಸುದ್ದಿ9 ಕೈಕಂಬ ಸನ್ಮಾರ್ಗದಿಂದ ಶ್ರೇಯಸ್ಸು: ಡಾ.ಹೆಗ್ಗಡೆ19 vp -1

19 vp -2 19 vp  sathyanarayan pooje

 

19 vp hegade 1 19 vp okuta padagrhana samaramba1 19 vp padagrahna samaramba 19 vp padagrhana samaramba ಭವಿಷ್ಯದ ಬಗ್ಗೆ ಕಲ್ಪನೆಯಿರಲಿ. ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸುವ ಯೋಜನೆಯಿರಲಿ. ಸಕರ್ಾರ ಹಾಗೂ ಸ್ವಸಹಾಯ ಸಂಘಗಳ ಯೋಜನೆಗಳನ್ನು ಉಪಯೋಗಿಸಿ ಯೋಚನೆಯನ್ನು ಸಕಾರಗೊಳಿಸುವ ಕೆಲಸವಾಗಬೇಕು. ನಾವು ಮಾಡುವ ಕೆಲಸ ಶ್ರದ್ಧೆ ಭಕ್ತಿಯಿಂದ, ಸನ್ಮಾರ್ಗದ ಹಾದಿಯಲ್ಲಿದ್ದರೆ ಶ್ರೇಯಸ್ಸು ಖಂಡಿತ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧಮರ್ಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು. ಅವರು ಮಂಗಳೂರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೈಕಂಬ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ, ಒರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೈಕಂಬ ವಲಯ ಇವುಗಳ ಜಂಟಿ ಆಶ್ರಯದಲ್ಲಿ ಗಂಜಿಮಠ ರಾಜ್ ಅಕಾಡೆಮಿ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಕೈಕಂಬ ವಲಯಮಟ್ಟದ ಒಕ್ಕೂಟಗಳ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದರು. ಸಮಾರಂಭವನ್ನು ಉದ್ಘಾಟಿಸಿ ಪದಗ್ರಹಣ ನೆರವೇರಿಸಿದರು. ಸನ್ಮಾನ: ದೈವಪಾತ್ರಿ ದಯಾನಂದ ಕತ್ತಲ್ಸಾರ್, ಆಟೋ ಚಾಲಕಿ ರಾಜೀವಿ ತೆಂಕೆಡಪದವು, ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಚೆನ್ನಪ್ಪ, ಪೌರ ಕಾಮರ್ಿಕ ಮುತ್ತ, ನವಜೀವನ ಸಮಿತಿ ಸದಸ್ಯರು ದಯಾನಂದ,ಗುಣಕರ,ಪದ್ಮನಾಭ, ಪ್ರಗತಿಪರ ಕೃಷಿಕ ಜಾನ್ಸನ್ ಪಿಂಟೋ, ಸ್ವರ್ಣ ಜಯಂತಿ ಯೋಜನೆಯನ್ನು ಸಮರ್ಥವಾಗಿ ಮುನ್ನಡೆಸಿ ದಶಮಾನೋತ್ಸವದ ಸಂಭ್ರಮದಲ್ಲಿರುವ ಶಿಬ್ರಿಕೆರೆ ಒಕ್ಕೂಟದ ಮಲ್ಲಿಕಾಜರ್ುನ ಸ್ವಸಹಾಯ ಸಂಘ , ವೀರಮಾರುತಿ ನಾಸಿಕ್ ಬ್ಯಾಂಡ್ ತಂಡವನ್ನು ಸನ್ಮಾನಿಸಲಾಯಿತು. ಗಂಜಿಮಠ ಗ್ರಾ.ಪಂ. ಅಧ್ಯಕ್ಷ ಪುಂಡಲೀಕ ಕಾಮತ್,ರಾಜೇಶ್ ನಾಯ್ಕ್ ಉಳಿಪಾಡಿಗುತ್ತು , ಹಿರಿಯ ಸಾಹಿತಿ ಲಕ್ಷ್ಮೀನಾರಾಯಣ ,ಪ್ರಗತಿಪರ ಕೃಷಿಕರಾದ ಜೀವಂಧರ್ಕುಮಾರ್ ಹೊಸಮನೆ, ಪೂಜಾ ಸಮಿತಿ ಗೌರವಾಧ್ಯಕ್ಷ ಎನ್.ಯತಿರಾಜ್ ಶೆಟ್ಟಿ, ಅಧ್ಯಕ್ಷ ಉದಯ ಕುಮಾರ್ ಆಳ್ವ, ರಾಜ್ ಅಕಾಡೆಮಿ ವಿದ್ಯಾಸಂಸ್ಥೆ ಸಂಚಾಲಕಿ ಮಮತಾ ವೈ.ಶೆಟ್ಟಿ, ಮಂಗಳೂರು ಕೇಂದ್ರ ಒಕ್ಕೂಟದ ಅಧ್ಯಕ್ಷ ಆಲ್ವಿನ್ ಡಿ’ಸೋಜ, ಯೋಜನೆ ನಿದರ್ೇಶಕ ಸಂಪತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಶ್ರೀಧರ ರಾವ್ ಸ್ವಾಗತಿಸಿದರು. ಕೈಕಂಬ ವಲಯ ಮೇಲ್ವಿಚಾರಕ ಶಿವಾನಂದ.ಪಿ ವರದಿ ವಾಚಿಸಿದರು. ದಯಾನಂದ ಕತ್ತಲ್ಸಾರ್ ಕಾರ್ಯಕ್ರಮ ನಿರೂಪಿಸಿದರು. ಅಜಿತ್ ಪ್ರಸಾದ್ ವಂದಿಸಿದರು.

By suddi9

Leave a Reply

Your email address will not be published. Required fields are marked *