ಮುಂಬಯಿ : ಕೂಟ ಮಹಾಜಗತ್ತು ಮುಂಬಯಿ ಅಂಗ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಪಿ.ವಿ ಐತಾಳ ಪ್ರಸಿದ್ಧಿಯ ಪಣಂಬೂರು ವಾಸುದೇವ ಐತಾಳ್ (೭೯.) ಅಲ್ಪಕಾಲದ ಅನಾರೋಗ್ಯದಿಂದ ಇಂದಿಲ್ಲಿ ಮಂಗಳವಾರ ಮುಂಜಾನೆ ಅಂಧೇರಿ ಪಶ್ಚಿಮದ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು.
ಬಿಎಸ್ಕೆಬಿ ಅಸೋಸಿಯೇಶನ್ (ಗೋಕುಲ) ಸಂಸ್ಥೆಯಲ್ಲಿ ಸುಮಾರು ಐದು ದಶಕಗಳಿಂದಲೂ ಸಕ್ರೀಯ ಸದಸ್ಯರಾಗಿದ್ದು, ಚುನಾವಣಾ ಅಧಿಕಾರಿ ಆಗಿಯೂ ಶ್ರಮಿಸಿದ್ದರು. ಸಮಾಜ ಸೇವಕರಾಗಿರೂ ಅಪ್ರತಿಮ ಹಿರಿಯ ರಂಗನಟರಾಗಿದ್ದು ಸದಾನಂದ ಸುವರ್ಣ, ಸುರೇಶ್ ಆನಗಳ್ಳಿ, ಮೋಹನ್ ಮಾರ್ನಾಡ್, ರಮೇಶ್ ಶಿವಪುರ, ಡಾ| ಭರತ್ಕುಮಾರ್ ಪೊಲಿಪು ಮೊದಲಾದವರ ನಿರ್ದೇಶಿತ ನಾಟಕಗಳಲ್ಲಿ ಅಭಿನಯಿಸಿದ್ದರು.
ದ.ಕ ಜಿಲ್ಲೆಯ ಮಂಗಳೂರು ಪಣಂಬೂರು ಮೂಲತಃ ಮೃತರು ಎರಡು ಹೆಣ್ಣು, ಓರ್ವ ಗಂಡು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.
