ಹತ್ರಾಸ್ ಪ್ರಕರಣ ಖಂಡಿಸಿ ಬಂಟ್ವಾಳ ಕಾಂಗ್ರೇಸ್ ಪ್ರತಿಭಟನೆ
ಬಂಟ್ವಾಳ: ಉತ್ತರ ಪ್ರದೇಶ ಹತ್ರಾಸ್ ನಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆಯ ವಿರುದ್ಧ ಮಾಜಿ ಸಚಿವ ರೈ ಯವರಿಂದ ಪ್ರತಿಭಟನೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಬಿ ಸಿ ರೋಡ್ ಮಿನಿ ವಿಧಾನಸೌಧ,ತಾಲೂಕು ಕಚೇರಿಯಲ್ಲಿ ಮುಂದೆ ನಡೆಯಿತು.

ಭಾರತದ ಯಾವ ಜಾತಿಯ,ಯಾವ ಧರ್ಮದ ಮಹಿಳೆಯರಿಗೂ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಘಟನೆ ನಡೆಯಬಾರದೆಂದು ಅಂಬೇಡ್ಕರ್ ಯುವ ವೇದಿಕೆ ಹಾಗೂ ಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ಈ ಬ್ರಹತ್ ಪ್ರತಿಭಟನೆಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರು ಭೇಟಿ ನೀಡಿ ಅಮಾಯಕ ದಲಿತ ಯುವತಿಯ ಅತ್ಯಾಚಾರ ಪರ ನ್ಯಾಯ ದೊರಕಬೇಕೆಂದು ಖಂಡಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಎಂ ಎಸ್ ಮೊಹಮ್ಮದ್,ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ,ತಾಲೂಕು ಪಂಚಾಯತ್ ಸಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ವಿ ಶೆಟ್ಟಿ,ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ,ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಜಯಂತಿ ವಿ ಪೂಜಾರಿ,ಪದ್ಮನಾಭ ನರಿಂಗಾನ,ಪುರಸಭಾ ಸದಸ್ಯರಾದ ಜನಾರ್ದನ್ ಚಂಡ್ತಿಮಾರ್,ಮಾಜಿ ಪುರಸಭಾ ಬೂಡ ಅಧ್ಯಕ್ಷರಾದ ಸದಾಶಿವ ಬಂಗೇರ,ಬಂಟ್ವಾಳ ಏನ್.ಎಸ್.ಯು.ಐ ಅಧ್ಯಕ್ಷರಾದ ವಿನಯ್ ಕುಮಾರ್, ಪ್ರಮುಖರಾದ ಉಮೇಶ್ ಆಮ್ಟೂರು, ಪ್ರೇಮ್ ಪಲ್ಲಮಜಲು, ಪ್ರವೀಣ್ ಸೂರ್ಯ ಹೊಸಂಗಡಿ, ಸತೀಶ್ ಅರಳ, ಸಂದೇಶ್ ಅರಳ, ರಕ್ಷಿತ್ ಸರಪಾಡಿ,ಕಿರಣ್ ಪಲ್ಲಮಜಲು, ಜನಾರ್ದನ ಕಕ್ಕೆಪದವು, ಪುಷ್ಪರಾಜ್ ಮೊದಲಾದವರು ಉಪಸ್ಥಿತರಿದ್ದರು.



