ಗುರುಪುರ-ಕೈಕಂಬ: ಎಸ್ಕೆಎಸ್ಸೆಸೆಫ್ ಕೈಕಂಬ ವಲಯ ವತಿಯಿಂದ ಏ.28ರಂದು “ಅಧ್ಯಾತ್ಮಿಕ ಮಜ್ಲಿಸುನ್ನೂರ್ ಹಾಗೂ ಸಮಸ್ತ ಆದರ್ಶ ಸಮ್ಮೇಳನ ಕಾರ್ಯಕ್ರಮವನ್ನು ಇಲ್ಲಿನ ಮೆಗಾ ಫ್ಲಾಝಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಇಂದು ಸಂಜೆ 7ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಕೆ. ವಿ. ಮಜೀದ್ ದಾರಿಮಿ ಕುಂಬ್ರ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೈಕಂಬ ವಲಯ ಅಧ್ಯಕ್ಷ ಟಿ.ಪಿ.ಜಮಾಲುದ್ದೀನ್ ದಾರಿಮಿ ವಹಿಸಲಿದ್ದಾರೆ. ಮಜ್ಲಿಸುನ್ನೂರ್ ನೇತೃತ್ವವನ್ನು ಸೈಯದ್ ಪಾಣಕ್ಕಾಡ್ ರಶೀದಲಿ ಶಿಹಾಬ್ ತಂಙಳ್ ವಹಿಸಲಿದ್ದಾರೆ.
ಮುಖ್ಯ ಪ್ರಭಾಷಣಕಾರರಾಗಿ ಮಂಗಳೂರು ಕೇಂದ್ರ ಜುಮಾ ಮಸೀದಿ ಖತೀಬ್ ಸದಕತುಲ್ಲಾ ಫೈಝಿ ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಗುರುಪುರ ಜಂಇಯ್ಯತುಲ್ ಮುಅಲ್ಲೀಮಿನ್ ಕೋಶಾಧಿಕಾರಿ ಎಂ.ಎ.ಆದಂ ಮುಸ್ಲಿಯಾರ್, ಅಡ್ಡೂರು ಬದ್ರಿಯ ಕೆಂದ್ರ ಜುಮಾ ಮಸಿದಿ ಖತೀಬ್ ಶರೀಪ್ ದಾರಿಮಿ ಹಾಗೂ ಮಳಲಿ ಕೆಂದ್ರ ಜುಮಾ ಮಸಿದಿ ಖತಿಬ್ ಇಬ್ರಾಹೀಂ ದಾರಿಮಿ ಉಪಸ್ಥಿತರಿರುವರು ಎಂದು ಅಬ್ದುಲ್ ಸಲಾಂ ಅಡ್ಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
