ಕುಪ್ಪೆಪದವು: ಎನ್ ಎಫ್ ಸಿ ಕುಪ್ಪೆಪದವು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆ ಸಹಯೋಗದಿಂದ ಎ.29ರಂದು ಬೃಹತ್ ರಕ್ತದಾನ ಶಿಬಿರವನ್ನು ಇಲ್ಲಿನ ಕಾವೇರಿ ವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ಅಂದು ಶಿಬಿರಕ್ಕೂ ಮುನ್ನ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಝಕರಿಯಾ ಆಚರಿಜೋರ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಎನ್ ಎಫ್ ಸಿ ಅಧ್ಯಕ್ಷ ಮುಸ್ತಫಾ ವಹಿಸಲಿದ್ದಾರೆ. ಕುಪ್ಪೆಪದವು ಜುಮಾ ಮಸೀದಿ ಖತೀಬ್ ಮೊಹಮ್ಮದ್ ಹನೀಫ್ ಖಾಸಿಮಿ, ಸಮಗಮ ಸೇವಾ ಕೇಂದ್ರದ ಕೆ.ಪುರುಷೋತ್ತಮ, ಕುಪ್ಪೆಪದವು ಚರ್ಚ್ ಧರ್ಮಗುರು ವೆಲೇರಿಯನ್ ಡಿ’ಸೋಜಾ ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಅಡ್ಮಿನ್ ಯಾಕೂಬ್ ಫಿರೋಝ್, ಬಜಪೆ ಪೊಲೀಸ್ ಠಾಣೆ ನಿರೀಕ್ಷಕ ಪರಶಿವ ಮೂರ್ತಿ, ಕುಪ್ಪೆಪದವು ಪ್ರಾಥಮಿಕ ರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜ್ಯೋತಿ ಪಿ.ಕೆ. ಹಾಗೂ ಮುಸ್ತಫಾ ಅಡ್ಡೂರು ದೆಮ್ಮೆಲೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.



