ಕೈಕಂಬ:ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವವು ಫೆ.18 ರಿಂದ ಫೆ. 25ರ ತನಕ ಜರುಗಲಿದೆ. ಆ ಪ್ರಯುಕ್ತ ಹಸಿರುಹೊರೆವಾಣಿ ಕಾಣಿಕೆಯ ಮೆರವಣಿಗೆಯ ಪೂರ್ವ ಭಾವಿ ಸಭೆಯು ಫೆ. 1 ರಂದು ಗುರುವಾರ ಸಂಜೆ 5.30 ಕ್ಕೆ ಕೈಕಂಬದ ಮಂಜುಶ್ರೀ ಕಾಂಪ್ಲೆಕ್ಸ್ ¸ ಶ್ರೀ ರಾಮ ಸಭಾ ಭವನದಲ್ಲಿ ನಡೆಯಲಿದೆ.
ಕೇಂದ್ರ ವಿಭಾಗದ ಮೂಡಬಿದ್ರೆ , ಎಡಪದವು, ಗಂಜಿಮಠ,ಗುರುಪುರ ಕೈಕಂಬ, ವಾಮಂಜೂರು ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿಸುವ ಸಮಿತಿಯ ಸಂಚಾಲಕ ಕೆ.ಕೃಷ್ಣ ರಾಜ ತಂತ್ರಿ, ಹಾಗೂ ಹೊರೆಕಾಣಿಕೆಯ ಸಂಯೋಜಕ ಪುಷ್ಪರಾಜ್ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
