51

ಅಡ್ಡೂರು: ಫೈವ್ ಸ್ಟಾರ್ ಯಂಗ್ ಬಾಯ್ಸ್ ಅಡ್ಡೂರು ಹಾಗೂ ಲಯನ್ಸ್ ಕ್ಲಬ್ ಕೈಕೈಂಬ ಸಂಯುಕ್ತಾಶ್ರಯದಲ್ಲಿ ಯೇನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಸಹಯೋಗದಿಂದ ಉಚಿತ ವೈದ್ಯಕೀಯ ಮತ್ತು ಮಧುಮೇಹ ತಪಾಸಣಾ ಶಿಬಿರ ಇಲ್ಲಿನ ಅಲ್ ಮದ್ರಸತುಲ್ ಬದ್ರಿಯಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಈ ವೇಳೆ ಪಾಲ್ಗೊಂಡ 250ಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ಉಚಿತ ಔಷಧಿ ಹಾಗೂ ಅರ್ಹ 24 ಶಿಬಿರಾರ್ಥಿಗಳಿಗೆ ಕನ್ನಡಕ ವಿತರಿಸಲಾಯಿತು.

521

ಕಾರ್ಯಕ್ರಮದಲ್ಲಿ ಅಡ್ಡೂರು ಬದ್ರಿಯಾ ಜುಮ್ಮ ಮಸೀದಿ ಖತೀಬ್ ಶರೀಫ್ ದಾರಿಮಿ, ಫೈವ್ ಸ್ಟಾರ್ ಯಂಗ್ ಬಾಯ್ಸ್ ಅಡ್ಡೂರು ಅಧ್ಯಕ್ಷ ಹಬೀಬ್ ಕಟ್ಟಪುಣಿ, ಜಿ.ಪಂ. ಸದಸ್ಯ ಯು.ಪಿ.ಇಬ್ರಾಹೀಂ, ಅಡ್ಡೂರು ಬದ್ರಿಯಾ ಜುಮ್ಮ ಮಸೀದಿ ಅಧ್ಯಕ್ಷ ಟಿ.ಸೈಯ್ಯದ್ ತೋಕೂರು, ಲಯನ್ಸ್ ಕ್ಲಬ್ ಕೈಕಂಬ ಅಧ್ಯಕ್ಷ ಜೆಪ್ರಿಯಾನ್ ತಾವ್ರೊ, ಅಹ್ಮದ್ ಬಾವಾ, ಡಾ.ಇ.ಕೆ.ಸಿದ್ದೀಕ್ ಮತ್ತಿತರರಿದ್ದರು.

By suddi9

Leave a Reply

Your email address will not be published. Required fields are marked *