ಪೊಳಲಿ: ಪೊಳಲಿಗೆ ಹತ್ತಿರದ ಪುಂಚಮೆ ಕಲ್ಕುಡ ಎಂಬಲ್ಲಿ ಸೋಮವಾರ ರಾತ್ರಿ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ 25 ಅಡಿ ಆಳದ ತೋಡಿಗೆ ಉರುಳಿ ಬಿದ್ದು, ಚಾಲಕ ಗಾಯಗೊಂಡಿದ್ದಾರೆ.
ಈ ಅಪಘಾತದಲ್ಲಿ ಜೀಪ್ ಚಾಲಕ ಪುಂಚಮೆಯ ಸೂರ್ಯನಾರಾಯಣ ರಾವ್ ಹಾಗೂ ಪುಂಚಮೆ ನವೀನ್ ಎಂಬವರು ಗಾಯಗೊಂಡಿದ್ದು ಸ್ಥಳೀಯರು ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀಪ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಕ್ರೇನ್ ಮೂಲಕ ಮೇಲೆತ್ತಲಾಯಿತು.


