ಕೈಕಂಬ : ಶ್ರೀ ಕ್ಷೇತ್ರ ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವ ನಿಮಿತ್ತ ಮೂಡಬಿದ್ರೆ ಕೇಂದ್ರದಿಂದ ಫೆ. 22ರಂದು ಹಸಿರುವಾಣಿ ಹೊರೆ ಕಾಣಿಕೆ ಆಗಮಿಸಲಿದ್ದು ಆ ಪ್ರಯುಕ್ತ  ಪೂರ್ವಭಾವಿ ಸಭೆ ಫೆ.1. ರಂದು ಗುರುಪುರ ಕೈಕಂಬದ ಮಂಜುಶ್ರೀ ಕಾಂಪ್ಲೆಕ್ಸಿನ ಶ್ರೀರಾಮ ಸಭಾಂಗಣದಲ್ಲಿ ಜರುಗಿತು.1 vp kaikamba1

ಫೆ. 22ರಂದು ಮೂಡಬಿದ್ರಿ ಕೇಂದ್ರ ವ್ಯಾಪ್ತಿಯ ಎಡಪದವು, ಗಂಜಿಮಠ, ಗುರುಪುರ, ಕೈಕಂಬ ಮತ್ತು ವಾಮಂಜೂರು ಉಪ-ಕೇಂದ್ರಗಳಿಂದ ದೇವಸ್ಥಾನಕ್ಕೆ ವಿಜೃಂಭಣೆಯಿಂದ ಹೊರೆ ಕಾಣಿಕೆ ಮೆರವಣಿಗೆ ಸಾಗಲಿದೆ.2vp 6

ಈ ಪುಣ್ಯ ಕಾರ್ಯದಲ್ಲಿ ಎಲ್ಲ ಜಾತಿ-ಧರ್ಮದವರು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ನಾಗ ದೇವರ ತುಳುನಾಡಿನ ಎಲ್ಲ ಧರ್ಮೀಯರಿಗೂ ಪ್ರಿಯವಾದ ದೇವರ. ಈ ಕಾರ್ಯದೊಂದಿಗೆ ಸೌಹಾರ್ದತೆ ಮೆರೆಯುವುದು ಮುಖ್ಯ ಎಂದು ಹೊರೆಕಾಣಿಕೆ ಸಮತಿಯ ಪ್ರಧಾನ ಸಂಚಾಲಕ ಮಹಾಬಲ ಪೂಜಾರಿ ಕಡಂಬೋಡಿ ಹೇಳಿದರು. ಕುಡುಪು ದೇವಸ್ಥಾನದ ತಂತ್ರಿ ಕೆ. ಕೃಷ್ಣರಾಜ  ಬ್ರಹ್ಮ ಕಲಶೋತ್ಸವದ ಬಗ್ಗೆ ಮಾಹಿತಿ ನೀಡಿದರು.1 vp kaikamba

2vp 1ವೇದಿಕೆಯಲ್ಲಿ ಹೊರೆಕಾಣಿಕೆ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಗಳಿಗೆ ಸಂಬಂಧಿಸಿದ ರಮಾನಾಥ ಅತ್ತಾರ್ ಮೂಡುಶೆಡ್ಡೆ, ಹರಿರಾವ್ ಕೈಕಂಬ, ವಿನೋದ್ ಮಾಡ, ಶ್ರೀಧರ್ ರಾವ್, ಸುಜನ್ ದಾಸ್  ಕುಡುಪು(ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ), ಪುಷ್ಪರಾಜ್ ಪೂಜಾರಿ (ಹೊರೆಕಾಣಿಕೆ ಸಮಿತಿ ಸಂಯೋಜಕ), ಚಂದ್ರನಾಥ ಅತ್ತಾವರ, ನವೀನ್ ಮೂಡುಶೆಡ್ಡೆ(ಹೊರೆಕಾಣಿಕೆ ಸಮಿತಿ ಸಹ-ಸಂಚಾಲಕರು), ಚಂದ್ರಹಾಸ್ ನಾರ್ಲ, ಪ್ರಮೋದ್ ರೈ ದೋಣಿಂಜೆಗುತ್ತು(ಗಡಿಕಾರ, ಶ್ರೀ ವೈದ್ಯನಾಥ ದೈವಸ್ಥಾನ ಗುರುಪುರ) ಎಡಪದವು ಮುರಲೀಧರ ಶೆಟ್ಟಿ ಉಪಸ್ಥಿತರಿದ್ದರು. ಕೃಷ್ಣ ಕಜೆ ಸ್ವಾಗತಿಸಿ ಪುಷ್ಪರಾಜ್ ಪೂಜಾರಿ ನಿರೂಪಿಸಿದರು. ಕುಡುಪು ದೇವಸ್ಥಾನದಲ್ಲಿ ಫೆ 18ರಿಂದ 25ರವರೆಗೆ ಬ್ರಹ್ಮಕಲಶೋತ್ಸವ ಜರುಗಲಿದೆ.

By suddi9

Leave a Reply

Your email address will not be published. Required fields are marked *