00009

ತಬೂಕ್ :  ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ  ಹಲವು ವರ್ಷಗಳಿಂದ ದುಡಿಯುತ್ತಿದ್ದ ಆಸೀಫ್ ಕೆಲವು ದಿನಗಳಿಂದ ಕೆಲಸವಿಲ್ಲದೆ ಇಲ್ಲಿನ ತಬೂಕಿಗೆ ಬಂದಿದ್ದರು. ಆದರೆ  ದುರದ್ರಷ್ಟಕರ ಇಖಾಮ ಮುಗಿದಿತ್ತು ಇದರಿಂದ ಕಂಗಾಲಾದ ಆಸೀಫ್ ಪುನಃ ದಮ್ಮಾಮ್ ಗೆ ಹೋಗಿ ಊರಿಗೆ ಹೋಗುವ ಪ್ರಯತ್ನದಲ್ಲಿದ್ದರು ಕೂಡ ವರ ಇಖಾಮದ ಅವಧಿ ಮುಗಿದಿದ್ದರಿಂದ ಇಲ್ಲಿನ ಪೋಲಿಸರು  ಇಖಾಮ ತಪಾಸಣೆ ನಡೆಸುವಾಗ ಆಸೀಫ್ ರನ್ನು ಬಂಧಿಸಿಯೇ  ಬಿಟ್ಟರು.

ಬಂಧನದ ವಿಷಯ ತಿಳಿದ ಆಸೀಫ್ ನ ಪ್ರಾಯೋಜಕ (ಕಫೀಲ್)  ಉರೂಬ್ (ನನ್ನ ಕೆಲಸದವ ಕಾಣೆಯಾಗಿದ್ದಾನೆ ಎನ್ನುವ ಕೇಸು) ದೂರು ದಾಖಲಿಸುತ್ತಾರೆ.  ಇದನ್ನರಿತ ಪೋಲಿಸರು ಆಸೀಫ್ ನನ್ನು ಊರಿಗೆ ಕಳುಹಿಸುವ ಸಲುವಾಗಿ ತಬೂಕಿನಿಂದ ಜಿದ್ದಾ ಜೈಲಿಗೆ ಕಳುಹಿಸಿಕೊಡುತ್ತಾರೆ.  ಆದರೆ ಆಸೀಫ್ ನ ಪ್ರಾಯೋಜಕ (ಕಫೀಲ್)ಕೆಲವು ದಿನಗಳ ನಂತರ ಊರೂಬ್ (ದೂರು) ಹಿಂಪಡೆದ ಕಾರಣಕ್ಕೆ ಆಸೀಫ್ ಊರಿಗೆ ಹೋಗಲಾಗದೆ ಮತ್ತೆ ಜಿದ್ದಾದಿಂದ ತಬೂಕ್ ಜೈಲಿಗೆ ಬರಬೇಕಾಯಿತು.

ಇದರಿಂದ ಕಂಗಾಲಾದ ಆಸೀಫ್ ರವರ  ಅಣ್ಣ ಅಶ್ರಫ್ ತಬೂಕಿನಲ್ಲಿರುವ ತನ್ನ ಪರಿಚಯಸ್ಥರನ್ನು ಸಂಪರ್ಕಿಸಿ  ಆಸೀಫ್ ನ ವಿಷಯದಲ್ಲಿ  ಸಹಕರಿಸುವಂತೆ ಸಹಾಯ ಯಾಚಿಸುತ್ತಾರೆ. ಇವರಿಂದ ಯಾವುದೇ ಸ್ಪಂದನೆ ಸಿಗದಿದ್ದರಿಂದ ಮತ್ತೆ ಆಸೀಫ್ ರವರು 40ಕ್ಕಿಂತ ಹೆಚ್ಚು ದಿನಗಳ ಕಾಲ ತಬೂಕ್  ಜೈಲಿನಲ್ಲಿ ಉಳಿಯುವಂತಾಯಿತು.

ಅನವಶ್ಯಕವಾಗಿ ಜೈಲಿನಲ್ಲಿ ಕೊರಗುತ್ತಿದ್ದ ಆಸೀಫ್ ಗೆ  ಜೈಲಿನಲ್ಲಿರುವ  ಮ೦ಜೇಶ್ವರ ಮೂಲದ ಯಹ್ಯಾ ಎ೦ಬವರ ಪರಿಚಯವಾಗಿ ಬಳಿಕ ಅವರಲ್ಲಿ ತನ್ನ ಅಳಲನ್ನು ತೋಡಿಕೊಂಡಾಗ ಇದಕ್ಕೆ ಸಾಂತ್ವನ ಹೇಳಿದ ಬಳಿಕ ಯಹ್ಯಾರವರು ಮರುಕ್ಷಣವೇ  ‘ಇ೦ಡಿಯನ್ ಸೋಷಿಯಲ್ ಫಾರಂ ತಬೂಕ್’  ಇದರ ಅಧ್ಯಕ್ಷರಾದ ಲತೀಫ್ ಉಪ್ಪಿನ೦ಗಡಿಯವರ ದೂರವಾಣಿ ಸಂಖ್ಯೆಯನ್ನು ನೀಡಿ ಸಹಾಯ ಯಾಚಿಸುವಂತೆ ಕೋರಲು ಆಸೀಫ್ ಅವರಿಗೆ  ಸಲಹೆ ನೀಡದರು.

ಬಳಿಕ ಆಸೀಫ್ ರವರು ತನಗೆ ಸಿಕ್ಕಿರುವ ಲತೀಫ್ ಅವರ  ದೂರವಾಣಿ ಸಂಖ್ಯೆಯನ್ನು ದಮ್ಮಾಮ್ ನಲ್ಲಿರುವ ಅಣ್ಣ ಅಶ್ರಫ್ ಗೆ ನೀಡಿ ‘ಇಂಡಿಯನ್ ಸೋಷಿಯಲ್ ಫಾರಂ ತಬೂಕ್’ ಘಟಕವನ್ನು ಸಂಪರ್ಕಿಸುವಂತೆ ತಿಳಿಸುತ್ತಾರೆ. ಅಣ್ಣ ಅಶ್ರಫ್ ಇಂಡಿಯನ್ ಸೋಷಿಯಲ್ ಫಾರಂ ತಬೂಕ್ ಅಧ್ಯಕ್ಷರಾದ ಲತೀಫ್ ಉಪ್ಪಿನಂಗಡಿಯವರನ್ನು ಸಂಪರ್ಕಿಸಿ ತಮ್ಮ ಆಸೀಫ್ ನ ಕಷ್ಟಕರ ಬದುಕನ್ನು ವಿವರಿಸಿ ಬಂಧನದಿಂದ ಮುಕ್ತಿಗೊಳಿಸಲು ಮನವಿ ಮಾಡಿಕೊಂಡರು. ಈ ವಿಷಯ ತಿಳಿದು ಕಾರ್ಯಪ್ರವರ್ತರಾದ ಲತೀಫ್ ಉಪ್ಪಿನಂಗಡಿ ಹಾಗೂ ಮಜೀದ್ ವಿಟ್ಲ ರವರು ಹಲವು ದಿನಗಳಿಂದ ಜೈಲಿನಲ್ಲಿದ್ದ ಆಸೀಫ್ ನನ್ನು ಭೇಟಿಯಾಗಿ ಸಾಂತ್ವ  ಹೇಳಿ ಆದಷ್ಟು ಬೇಗನೆ ಊರಿಗೆ ಕಳುಹಿಸುವ ಭರವಸೆ ನೀಡಿದರು.

ಬಳಿಕ ಲತೀಫ್, ಮಜೀದ್ ಅವರು ಸೇರಿದಂತೆ  ‘ಇಂಡಿಯನ್ ಸೋಷಿಯಲ್ ಫಾರಂ’ ಸದಸ್ಯರು  ಜೈಲು ಅಧಿಕಾರಿಗಳನ್ನು ಭೇಟಿ ಮಾಡಿ ಆಸೀಫ್ ರವರನ್ನು ಊರಿಗೆ ಕಳುಹಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿ ತದನಂತರ ಅಲ್ ಹಮ್ದುಲಿಲ್ಲ ಆಸೀಫ್ ರವರು ‘ಇಂಡಿಯನ್ ಸೋಷಿಯಲ್ ಫಾರಂ’ನ ಕೆಲಸ ಕಾರ್ಯ ಶ್ಲಾಘಿಸಿ, ತಾಯ್ನಾಡಿಗೆ ಭದ್ರವಾಗಿ ತಲುಪಿದರು.

 ವರದಿ: ಇಂಡಿಯನ್ ಸೋಷಿಯಲ್ ಫಾರಂ ತಬೂಕ್

By suddi9

Leave a Reply

Your email address will not be published. Required fields are marked *